Chikkamagaluru: ಅಪಘಾತದಲ್ಲಿ 17 ಹಲ್ಲು ಕಟ್‌; ಆತ್ಮಹತ್ಯೆಗೆ ಶರಣಾದ ಯುವಕ!

Share the Article

Chikkamagaluru: ಜಿಲ್ಲೆಯ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

18 ವರ್ಷದ ವಿಘ್ನೇಶ್‌ ಎಂಬಾತನೇ ಮೃತ ಯುವಕ.

ನಾಲ್ಕು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡು ಈತನಿಗೆ ಇದರಿಂದ ತೀವ್ರ ಶಾರೀರಿಕ, ಮಾನಸಿಕ ನೋವು ಅನುಭವಿಸುತ್ತಿದ್ದ. ಇದರಿಂದ ನೊಂದ ಈತ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾನೆ.

ಕೊಪ್ಪದಲ್ಲಿರುವ ಐಟಿಐ ಸಂಸ್ಥೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದದ ವಿಘ್ನೇಶ್‌, ಯಾವಾಗಲೂ ಆಸ್ಪತ್ರೆಗೆ ಹೋಗಿ ಬರಬೇಕಿತ್ತು. ನಿರಂತರ ಚಿಕಿತ್ಸೆ, ಹಲ್ಲುಗಳ ಸಮಸ್ಯೆಯಿಂದ ಆತ ತೀರಾ ನೊಂದು ಹೋಗಿದ್ದ.

ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments are closed.