Hasana: ಜನರ ನಡುವೆಯೇ ಲಾಂಗ್‌ ಹಿಡಿದು ಓಡಾಡಿದ ಮಹಿಳೆ!

Share the Article

Hasana: ಕೌಟುಂಬಿಕ ಕಲಹದ ಕಾರಣ ಎರಡು ಕುಟುಂಬಗಳ ನಡುವೆ ಜಗಳ ಉಂಟಾಗಿದ್ದು, ಮಹಿಳೆಯೋರ್ವಳು ಕೈಯಲ್ಲಿ ಲಾಂಗ್‌ ಹಿಡಿದು ಓಡಾಡಿದ ಘಟನೆ ಹಾಸನದ ಹೊಸ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತಿ ಕೆಲವರನ್ನು ನಿಂದನೆ ಮಾಡುತ್ತಿದ್ದರೆ, ಮಹಿಳೆ ಕೈಯಲ್ಲಿ ಲಾಂಗ್‌ ಹಿಡಿದು ಪತಿಯ ಹಿಂದೆ ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇದರ ಕುರಿತು ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲು ಆಗಿಲ್ಲ. ಲಾಂಗ್‌ ಹಿಡಿದು ಓಡಾಡುವ ಮಹಿಳೆ ಯಾರು ಎಂದು ಇನ್ನೂ ಪತ್ತೆಯಾಗಿಲ್ಲ. ಹಾಸನ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Comments are closed.