of your HTML document.

Crime News: ವಿಮಾನ ನಿಲ್ದಾಣದ ಶೌಚಾಲಯದ ನೀರಿನಲ್ಲಿ ಮುಳುಗಿಸಿ ಸಾಕುನಾಯಿ ಹತ್ಯೆ-ಮಹಿಳೆ ಅರೆಸ್ಟ್‌ !

Crime News: ತನ್ನ ಸಾಕುನಾಯಿಯನ್ನು ವಿಮಾನ ನಿಲ್ದಾಣದ ಶೌಚಾಲಯದ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಮಹಿಳೆಯನ್ನು ಅಮೆರಿಕದ ಒರ್ಲ್ಯಾಂಡೋ ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತ ಮಹಿಳೆಯನ್ನು ಅಗಾಥಾ ಲಾರೆನ್ಸ್‌ (57) ಎಂದು ಗುರುತಿಸಲಾಗಿದೆ.

ಸಾಕು ನಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದಕ್ಕೆ ಮಹಿಳೆ ಈ ಕೃತ್ಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.3 ರಂದು ಈ ಘಟನೆ ನಡೆದಿದ್ದು, ಆರೋಪಿ ಮಹಿಳೆ ಒರ್ಲ್ಯಾಂಡೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕ್ಸಾಸ್‌ಗೆ ತೆರಳುತ್ತಿದ್ದರು. ಈ ಸಂದರ್ಭ ತಮ್ಮ ಸಾಕುನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಲು ಆಗಿರಲಿಲ್ಲ. ಸೂಕ್ರ ದಾಖಲೆ ಇಲ್ಲದ ಕಾರಣ ಭದ್ರತಾ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ.

ಹೀಗಾಗಿ ಮಹಿಳೆ ನಾಯಿಯನ್ನು ವಿಮಾನ ನಿಲ್ದಾಣದ ವೇಟಿಂಗ್‌ ರೂಂನ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಳು.

ಸಾಕ್ಷ್ಯಾಧಾರಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ಮಹಿಳೆಗೆ ವಾರಂಟ್‌ ನೀಡಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಘಟನೆ ಕುರಿತು ಪ್ರಾಣಿ ಪ್ರಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Comments are closed.