Ramanagara: ಬಿಡದಿ ಬಳಿ ಕಾರ್ಖಾನೆಯಲ್ಲಿ ಪಾಕಿಸ್ತಾನ ಪರ ಬರಹ ಪ್ರಕರಣ; ಇಬ್ಬರು ಅರೆಸ್ಟ್!

Share the Article

Ramanagara: ಬಿಡದಿಯ ಬಳಿಯ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರ ಬರಹ ಬರೆದಿದ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬಂಧಿತರನ್ನು ಉತ್ತರ ಕರ್ನಾಟಕದ ಹೈಮದ್‌ ಹುಸೇನ್‌, ಸಾಧಿಕ್‌ ಎಂದು ಗುರುತಿಸಲಾಗಿದೆ. ಕನ್ನಡಿಗರ ಕುರಿತು ಅವಾಚ್ಯ ಬರಹ, ದೇಶದ್ರೋಹ, ಕನ್ನಡಿಗರಿಗೆ ಅವಮಾನ ಪ್ರಕರಣಗಳ ಅಡಿಯಲ್ಲಿ ಇಬ್ಬರ ಬಂಧನ ಮಾಡಲಾಗಿದೆ.

ಪ್ರಕರಣದ ವಿವರ:
ಮಾ.15 ರಂದು ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯ ದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆಯಾಗಿದ್ದು. ಬಿಡದಿಯ ಟೊಯೋಟಾ ಬುಶೋಕುನಲ್ಲಿ ಈ ಘಟನೆ ನಡೆದಿತ್ತು.

ಕೆಲವು ಕಿಡಿಗೇಡಿಗಳು ಶೌಚಾಲಯದ ಗೋಡೆಯಲ್ಲಿ ಪಾಕಿಸ್ತಾನ ಜೈ, ಕನ್ನಡಿಗರು ಸೂ.. ಮಕ್ಕಳು ಎಂದು ಬರೆದಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಕಂಪನಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಯಾರೇ ಕಿಡಿಗೇಡಿ ಇದ್ದರೂ ಕಠಿಣ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.

ಆದ್ದರಿಂದ ಎಲ್ಲಾ ವರ್ಗದ ಉದ್ಯೋಗಿಗಳು ಮೇಲೆ ತಿಳಿಸಿದ ವಿಷಯವನ್ನು ಸೂಕ್ಷ್ಮವಾಗಿ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಯಾವುದೇ ಉದ್ಯೋಗಿಯು ಈ ರೀತಿಯ ಕಿಡಿಗೇಡಿ ಕೃತ್ಯ ಮಾಡುವಾಗ ಸಿಕ್ಕಿಬಿದ್ದಲ್ಲಿ ಅತ್ಯಂತ ಕಠಿಣ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಆಡಳಿತ ಮಂಡಳಿಯು ತಿಳಿಸುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿತ್ತು.

Comments are closed.