Kalburgi: ನಡು ರಸ್ತೆಯಲ್ಲಿ ಕೊ*ಲೆ ದೃಶ್ಯದ ಭೀಕರ ಶೂಟಿಂಗ್‌; ಇಬ್ಬರ ಬಂಧನ!

Share the Article

Kalburgi: ಸಿನಿಮಾಕ್ಕಿಂತಲೂ ಭೀಕರವಾಗಿ ಕೊಲೆ ಮಾಡುವ ದೃಶ್ಯವೊಂದನ್ನು ನಡು ರಸ್ತೆಯಲ್ಲಿ ರೀಲ್ಸ್‌ ಮಾಡುವ ಮೂಲಕ ವೈರಲ್‌ ಮಾಡಿದ್ದು, ಇದೀಗ, ನಗರದ ಪೊಲೀಸರನ್ನು ಸತ್ವ ಪರೀಕ್ಷೆಗೆ ಗುರಿ ಮಾಡಿದ್ದ ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸರು ಇಬ್ಬರನ್ನು ಬಂಧನ ಮಾಡಿ, ಜೈಲಿಗೆ ಕಳುಹಿಸಿದ್ದಾರೆ.

ನಡು ರಸ್ತೆಯಲ್ಲಿ ಕೊಲೆ ದೃಶ್ಯ ಚಿತ್ರೀಕರಣ ಮಾಡಿ ಕೂಗಾಡುತ್ತಾ ನಟಿಸಿದ ಇಬ್ಬರು ಇದೀಗ ಜೈಲು ಪಾಲಾಗಿದ್ದಾರೆ. ಹುಮನಾಬಾದ್‌ ರಿಂಗ್‌ ರಸ್ತೆಯಲ್ಲಿ ರಾತ್ರಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಆಟೋ, ಇತರೆ ವಾಹನಗಳ ಬಳಕೆ ಮಾಡಲಾಗಿತ್ತು. ನಡುರಸ್ತೆಯಲ್ಲಿ ಸುತ್ತಿಗೆಯಿಂದ ವ್ಯಕ್ತಿಯೊಬ್ಬನ ಎದೆ ಮೇಲೆ ಕುಳಿತ ವ್ಯಕ್ತಿ ಆತನನ್ನು ಕೊಲೆ ಮಾಡಿ ರಕ್ತಸಿಕ್ತವಾದ ದೇಹದ ಮೇಲೆ ಕೇಕೆ ಹಾಖುವ ವಿಡಿಯೋ ವೈರಲ್‌ ಆಗಿತ್ತು. ಇದನ್ನು ಕಂಡು ಜನತೆ ಬೆಚ್ಚಿಬಿದ್ದಿದ್ದರು.

ʼಮೆಂಟಲ್‌ ಮಜನುʼ ಎನ್ನುವ ಶಾರ್ಟ್‌ ಮೂವಿಗೆ ಈ ಚಿತ್ರೀಕರಣ ನಡೆದಿದೆ. ಸಚಿನ್‌ ಹಾಗೂ ಸಾಯಣ್ಣ ರಕ್ತದ ಮಾದರಿಯಲ್ಲಿ ಕೆಂಪ ಬಣ್ಣ ಹಚ್ಚಿ ಅರೆ ಬೆತ್ತಲೆಯಾಗಿ ರಕ್ತಸಿಕ್ತ ದೇಹದ ಮೇಲೆ ಕುಳಿತು ಕೈಯಲ್ಲಿ ಸುತ್ತಿಗೆ ಹಿಡಿದು ಕೊ*ಲೆ ಮಾಡಿ ಜೋರಾಗಿ ಕೂಗಾಡುವ ದೃಶ್ಯ ಚಿತ್ರೀಕರಿಸಲಾಗಿತ್ತು.

ಬೆಳಗಾಗುವುದರೊಳಗೆ ಈ ವಿಡಿಯೋ ವೈರಲ್‌ ಆಗಿದ್ದು, ರಿಂಗ್‌ ರಸ್ತೆಯಲ್ಲಿ ಭೀಕರ ಕೊಲೆ ನಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಈ ರೀತಿಯ ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಸಚಿನ್‌ ಸಾಯಬಣ್ಣ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ ತನಿಖೆ ನಡೆಸಿದ್ದಾರೆ.

Comments are closed.