Fraud News: 300 ಕೋಟಿ ಅಮೆರಿಕನ್‌ ಡಾಲರ್‌, ಚಿನ್ನದ ವ್ಯವಹಾರದ ಮಾತು; ಗೃಹಿಣಿಗೆ 1 ಕೋಟಿ ವಂಚನೆ!

Share the Article

Fraud News: ಮನೆಗೆ ಶಾಂತಿ ಪೂಜೆ ಮಾಡಲೆಂದು ಬಂದ ವ್ಯಕ್ತಿಯೊಬ್ಬ ತಾನು ಚಿನ್ನದ ವ್ಯವಹಾರ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಒಂದು ಕೋಟಿ ರೂ.ಗೂ ಅಧಿಕ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಮರಾವತಿ ಎಂಬ ಗೃಹಿಣಿಗೆ ಚಿನ್ನದ ಬಿಸ್ಕೆಟ್‌ಗಳನ್ನು ತೋರಿಸಿ ವಂಚನೆ ಮಾಡಿದ ಆರೋಪದಲ್ಲಿ ಗೋಪಾಲಕೃಷ್ಣ, ರಾಕೇಶ್‌ ರೆಡ್ಡಿ, ರೂಪಾ ಹಾಗೂ ಯಶವಂತ್‌ ಕುಮಾರ್‌ ಎಂಬುವವರ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಕಳೆದ ವರ್ಷ ಅಮರಾವತಿ ತಮ್ಮ ಮನೆಯಲ್ಲಿ ಶಾಂತಿ ಪೂಜೆಗಾಗಿ ಗೋಪಾಲಕೃಷ್ಣ ಎಂಬುವವರನ್ನು ಮನೆಗೆ ಕರೆ ತಂದಿದ್ದು. ಪೂಜೆ ಮುಗಿದ ಎರಡು ದಿನದ ನಂತರ ರಾಕೇಶ್‌ ರೆಡ್ಡಿಯವರೊಂದಿಗೆ ಅಮರಾವತಿಯರ ಮನೆಗೆ ಬಂದಿದ್ದ ಗೋಪಾಲಕೃಷ್ಣ ನಮತ್ರ 300 ಕೋಟಿ ಅಮೆರಿಕನ್‌ ಡಾಲರ್‌ ಇದೆ. ನಮಗೆ ಕೆಜಿ ಲೆಕ್ಕದಲ್ಲಿ ಚಿನ್ನ ದೊರೆಯುತ್ತದೆ. ಪ್ರತಿ ಗ್ರಾಂ ಚಿನ್ನವನ್ನು 4 ಸಾವಿರ ರೂ. ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ.

ಅಮರಾವತಿ ಅವರು ತಮ್ಮ ಮಗನ ಸಮ್ಮುಖದಲ್ಲಿಯೇ ಗೋಲ್ಡ್‌ ಬಿಸ್ಕೆಟನ್ನು ಜ್ಯುವೆಲ್ಲರಿ ಅಂಗಡಿಗೆ ಮಾರಟ ಮಾಡಿ ಹಣ ಪಡೆಯುವುದಾಗಿ ನಂಬಿಕೆ ಉಟ್ಟಿಸಿದ್ದರು. ಹೀಗೆ ನಂಬಿದ ಮಹಿಳೆ ಪರಿಚಿತರ ಕಡೆಯಿಂದ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಂಡು ಇವರಿಗೆ ನೀಡಿದ್ದರು. ಆದರೆ ಚಿನ್ನ ನೀಡದೇ ಇದ್ದಾಗ, ನಮ್ಮ ಚಿನ್ನ ಕಸ್ಟಮ್ಸ್‌ ಅಧಿಕಾರಿಗಳ ಬಳಿ ಇದೆ ಎಂದು ಸಬೂಬು ಹೇಳಿದ್ದರು.

ತುಂಬಾ ದಿನ ಕಳೆದರೂ ಚಿನ್ನ ನೀಡದೇ ಹೋದಾಗ ಆರೋಪಿಗಳ ವಿರುದ್ಧ ಅಮರಾವತಿಯವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

Comments are closed.