Madanthyar: ಕಾಣೆಯಾಗಿದ್ದ ವ್ಯಕ್ತಿ, ಶವವಾಗಿ ಪತ್ತೆ!

Share the Article

Madanthyar: ಬಂದಾರು ಗ್ರಾಮದ ಮೈರೋಳ್ತಡ್ಕ ಸಮೀಪದ ನೂಜಿ ಮನೆ ನಿವಾಸಿ ಚೆನ್ನಪ್ಪ ಪರವ (58) ಅವರ ಮೃತದೇಹ ಮಾ.12 ರಂದು ಪದ್ಮುಂಜ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಉಪ್ಪಿನಂಗಡಿಗೆ ಹೋಗುವುದಾಗಿ ಮಾ.11 ರಂದು ಹೇಳಿ ಹೊರಟಿದ್ದ ಇವರು ಮತ್ತೆ ವಾಪಾಸು ಬಂದಿರಲಿಲ್ಲ. ವಿಪರೀತ ಮದ್ಯಸೇವೆಯ ಚಟ ಹೊಂದಿದ್ದ ಇವರು ಕುಡಿದು ಬಸ್‌ ನಿಲ್ದಾಣದಲ್ಲಿ ಮಲಗಿರುವ ಸಮಯದಲ್ಲಿ ಹೃದಯಾಘಾತ ಆಗಿರಬಹುದು ಎಂದು ಸಂಶಯಿಸಲಾಗಿದೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.