Belagavi: ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಬಿದ್ದ ಕಾಂಕ್ರಿಟ್‌ ಮಿಕ್ಸರ್‌ ಲಾರಿ!

Belagavi: ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಬಿದ್ದು ಇಬ್ಬರು ಪವಾಡ ಸದೃಶವಾಗಿ ಪಾರಾದ ಘಟನೆ ನಗರದ ಕೆಎಲ್‌ಇ ಆಸ್ಪತ್ರೆ ಬಳಿ ಶನಿವಾರ (ಮಾ.15) ರಂದು ಸಂಭವಿಸಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರಿನ ಮೇಲೆ ಏಕಾ ಏಕಿ ಸಿಮೆಂಟ್‌ ಮಿಕ್ಸರ್‌ ಲಾರಿ ಬಿದ್ದಿದೆ. ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಒಳಗೆ ಸಿಕ್ಕಾಕ್ಕೊಂಡು ಒದ್ದಾಡುತ್ತಿದ್ದು, ಕಾಪಾಡಿ ಕಾಪಾಡಿ ಎಂದು ಗೋಗೆರೆಯುತ್ತಿದ್ದು. ಕೂಡಲೇ ಸ್ಥಳಕ್ಕೆ ಎರಡು ಕ್ರೇನ್‌ ತರಿಸಿ, ಮೊದಲಿಗೆ ಲಾರಿ ಮೇಲಕ್ಕೆತ್ತಲಾಗಿದೆ. ನಂತರ ಕೂಡಲೇ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಕಾರಿನೊಳಗಿದ್ದ ಇಬ್ಬರನ್ನೂ ಹೊರಕ್ಕೆ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಲಾರಿ ಚಾಲಕ ಹಾಗೂ ಸಹಾಯಕನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಯಾಚರಣೆ ಸಂದರ್ಭ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Comments are closed.