Dharmasthala : ‘ಕೊಚ್ಚೆ ಹಂದಿಗಳಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ’ – ಧರ್ಮಸ್ಥಳ ದೇವಾಲಯದ ಎದುರು ವಿಚಿತ್ರ ಬೋರ್ಡ್: ಹಾಕಿದ್ದು ಯಾರು, ಯಾರಿಗಾಗಿ?

Dharmasthala : ನಾಡಿನ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಸದ್ಯ ಸೌಜನ್ಯ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಇದರ ಸತ್ಯಾಸತ್ಯತೆ ಅರಿವು ಆಗಬೇಕಿರುವುದಂತೂ ಸತ್ಯ. ಅಲ್ಲದೆ ಇತ್ತೀಚಿಗೆ ಸಮೀರ್ ಎಂಡಿ ಎಂಬ ಮುಸ್ಲಿಂ ಯುವಕ ಮಾಡಿದ ವಿಡಿಯೋ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಈ ಕುರಿತಾಗಿ ಭಾರಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ ಎದುರು ಇದೆ ಎನ್ನಲಾದ ಎಡಿಟ್ ಮಾಡಿದ ಬೋರ್ಡ್ ಒಂದು ವೈರಲ್ ಆಗಿದೆ.
ಸಮೀರ್ ಎಂಡಿ ವಿಡಿಯೋ ಮಾಡಿ ಹರಿಬಿಟ್ಟ ಬಳಿಕ ಧರ್ಮಸ್ಥಳದ ಹೆಸರನ್ನು ಕೆಡಿಸಲು ಈ ರೀತಿಯ ವಿಡಿಯೋಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆಗುತ್ತಿವೆ. ಈ ನಡುವೆ ಧರ್ಮಸ್ಥಳದ ಪರ ಬ್ಯಾಟ್ ಬೀಸಿರುವ ಕೆಲವರು ಹೊಸದೊಂದು ಫೋಟೊ ಎಡಿಟ್ ಮಾಡಿ ಬೇಡದ ಅಸಭ್ಯ ವರ್ತನೆ ಮಾಡಿದ್ದಾರೆ.
ಹೌದು, ಧರ್ಮಸ್ಥಳದ ದೇವಾಲಯದ ಮುಂದೆ ‘ಹಂದಿಗಳಿಗೆ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ’ ಎಂಬ ಸಾಲುಗಳಿರುವ ಬೋರ್ಡ್ ಇರುವ ಹಾಗೆ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಇದನ್ನೇ ನಂಬಿಕೊಂಡ ಕೆಲವರು ಶೇರ್ ಮಾಡತೊಡಗಿದ್ದಾರೆ. ಇನ್ನು ಇದನ್ನು ಎಡಿಟ್ ಮಾಡಿ ಹಾಕಿದವರು ಯಾರಿಗಾಗಿ ಈ ಬೋರ್ಡ್ ಹಾಕಿದ್ದಾರೆ?ಯಾವ ಉದ್ದೇಶಕ್ಕಾಗಿ ಹಾಕಿದ್ದಾರೆ ಎಂಬುದು ತಿಳಿದಿಲ್ಲ.
Comments are closed.