Superstitious Ritual: ಮೂಢನಂಬಿಕೆಗೆ ಆರು ತಿಂಗಳ ಮಗುವಿನ ಮುಖಕ್ಕೆ ಬೆಂಕಿ ಇಟ್ಟ ತಾಂತ್ರಿಕ!

Superstitious Ritual: ಶಿವಪುರಿ ಜಿಲ್ಲೆಯ ಹನುಮಾನ್ ಕಾಲೋನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂಢನಂಬಿಕೆಯ ಆಚರಣೆಗಾಗಿ ಪೋಷಕರು ತಮ್ಮ ಆರು ತಿಂಗಳ ಮಗುವನ್ನು ತಾಂತ್ರಿಕನ ಬಳಿ ಕರೆದುಕೊಂಡು ಹೋಗಿದ್ದು, ಆತ ಮಗುವಿನ ಮುಖವನ್ನು ಅತಿಯಾಗಿ ಸುಟ್ಟಿದ್ದರಿಂದ ಮಗುವಿನ ಕೆನ್ನೆ, ತುಟಿಗಳು, ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸುಟ್ಟ ಗಾಯದಿಂದ ಎರಡೂ ಕಣ್ಣುಗಳ ಮೇಲೆ ಪರಿಣಾಮ ಬೀರಿದ್ದು, ಮಗು ತನ್ನ ದೃಷ್ಟಿಯನ್ನು ಕಳೆದುಕೊಳ್ಳುವ ಭೀತಿ ಇದೆ ಎಂದು ವೈದ್ಯರಿಗೆ ಉಂಟಾಗಿದೆ.
ಆದೇಶ್ ವರ್ಮಾ ತನ್ನ ಮಗ ಮಯಾಂಕ್‌ನನ್ನು ಗುರುವಾರ ಸಂಜೆ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು, ಪೋಷಕರಲ್ಲಿ ಸುಟ್ಟ ಗಾಯಗಳ ಬಗ್ಗೆ ಕೇಳಿದಾಗ, ತಾಯಿ ರಾಮನಗರ, ಕೊಲಾರಸ್‌ನಲ್ಲಿರುವ ತಾಂತ್ರಿಕನ ಬಳಿ ಮಗುವನ್ನು ಕರೆದೊಯ್ದಿರುವ ಕುರಿತು ಹೇಳಿದ್ದಾರೆ. ಆಚರಣೆಯ ಸಮಯದಲ್ಲಿ ಸುಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ನಂತರ ಪೋಷಕರು ತಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿದ್ದು, ಅಡುಗೆ ಮನೆಯಲ್ಲಿ ಬಿಸಿ ಟೀ ಕುಡಿದು ಮಗುವಿಗೆ ಸುಟ್ಟ ಗಾಯಗಳಾಗಿದೆ ಎಂದು ಹೇಳಿದ್ದಾರೆ. ವೈದ್ಯರು ನಂತರ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ಹಾಗೂ ಇದು ಮೂಢನಂಬಿಕೆಯಿಂದ ನಡೆದ ಘಟನೆ ಎಂದು ಖಚಿತಪಡಿಸಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Comments are closed.