Gadaga: ವಿದ್ಯಾರ್ಥಿನಿಯರಿಗೆ ಕೆಮಿಕಲ್‌ ಬಣ್ಣ ಎರಚಿದ ಪ್ರಕರಣ; ಓರ್ವ ಅಪ್ರಾಪ್ತ ಬಾಲಕ ಪೊಲೀಸ್‌ ವಶಕ್ಕೆ!

Gadaga: ಕಿಡಿಗೇಡಿಗಳ ಗುಂಪೊಂದು ಕೆಮಿಕಲ್‌ ಬಣ್ಣವನ್ನು 6 ವಿದ್ಯಾರ್ಥಿನಿಯರಿಗೆ ಎರಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಗದಗ ಜಿಲ್ಲೆ ಲಕ್ಷ್ಮೀಶ್ವರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಬೆಳಿಗ್ಗೆ ಕಿಡಿಗೇಡಿ ಯುವಕರು ವಿದ್ಯಾರ್ಥಿನಿಯರ ಮೇಲೆ ಕೆಮಿಕಲ್‌ ಬಣ್ಣ ಎರಚಿ ಹಿಂಸಿಸಿದ್ದರು. ಲಕ್ಷ್ಮೀಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಈ ಘಟನೆ ನಡೆದಿದೆ.

ಕೆಮಿಕಲ್‌ ಬಣ್ಣದಿಂದ ವಿದ್ಯಾರ್ಥಿನಿಯರು ಉಸಿರಾಟದ ತೊಂದರೆ, ಎದೆನೋವಿನಿಂದ ನರಳಾಡುತ್ತಿದ್ದಾರೆ. ಇವರನ್ನು ಜಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Comments are closed.