Crime News: ಅತ್ತೆ-ಮಾವನ ಮೇಲೆ ವೈದ್ಯೆ ಹಲ್ಲೆ!

Crime News: ವೃದ್ಧ ಅತ್ತೆ-ಮಾವನ ವೈದ್ಯ ಸೊಸೆ ಹಾಗೂ ಆಕೆಯ ಇಬ್ಬರು ಮಕ್ಕಳು ಅಮಾನುಷವಾಗಿ ಹಲ್ಲೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಲ್ಲೆಯನ್ನು ಖಂಡಿಸಿರುವ ನೆಟ್ಟಿಗರು ಹಲ್ಲೆಗೈದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಹಲ್ಲೆ ವಿಡಿಯೋವನ್ನು ‘ಎಕ್ಸ್’ ಆ್ಯಪ್ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದವರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ಹಾಗೂ ಆಕೆ ಇಬ್ಬರು ಮಕ್ಕಳು ಎನ್ನಲಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಕ್ಸ್ ಖಾತೆಯಲ್ಲಿ ಒತ್ತಾಯಿಸಲಾಗಿದೆ.
ಹಲ್ಲೆಗೊಳಗಾದ ಆರ್‌ಎಚ್‌ಸಿಎಸ್ ಲೇಔಟ್ ನಿವಾಸಿ ಜೆ.ನರಸಿಂಹಯ್ಯ ದೂರು ನೀಡಿದ್ದಾರೆ. ನನ್ನ ಮಗ ನವೀನ್ ಕುಮಾರ್ ಮತ್ತು ಪ್ರಿಯ ದರ್ಶಿನಿಗೆ 2007ರಲ್ಲಿ ಮದುವೆಯಾಗಿದ್ದು, ಸದ್ಯ ವಿಚ್ಛೇದನದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮಾ.10ರಂದು ರಾತ್ರಿ 8.30ಕ್ಕೆ ಪ್ರಿಯ ದರ್ಶಿನಿ ಹಾಗೂ ಆಕೆಯ ಮಕ್ಕಳು ಬಂದು ಹಲ್ಲೆ ಮಾಡಿದ್ದು, ಪ್ರಾಣ ಬೆದ ರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.