Mangaluru : ಪಕ್ಕದ ಮನೆಯವರ ಕಿರಿಕ್ ಸಹಿಸದೆ ಬೈಕ್ ಗೆ ಕಾರು ಗುದ್ದಿಸಿ ಸಾಯಿಸಲು ಸ್ಕೆಚ್ – ಗುದ್ದಿದ ರಭಸಕ್ಕೆ ಕಾಂಪೌಂಡ್​ ಮೇಲೆ ನೇತಾಡಿದ ಅಮಾಯಕ ಮಹಿಳೆ, ಭಯಂಕರ ವಿಡಿಯೋ ವೈರಲ್

Mangaluru : ಅಕ್ಕ ಪಕ್ಕ ಮನೆಯಲ್ಲಿರುವವರು ಹೆಚ್ಚಿನವರು ಒಬ್ಬರಿಗೊಬ್ಬರು ಕಿಡಿ ಕಾರುತ್ತಲೇ ಇರುತ್ತಾರೆ. ನೆರೆಹೊರೆಯವರೊಂದಿಗೆ ಚೆನ್ನಾಗಿರಬೇಕೆಂಬ ಭಾವನೆ ಎಂದಿಗೂ ಅವರಿಗೆ ಬರಲಾರದು. ಅಂತೆಯೇ ಇದೀಗ ಮಂಗಳೂರಿನಲ್ಲಿ(Mangaluru) ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಅಕ್ಕಪಕ್ಕ ಮನೆಯವರು ಕಿರಿಕ್ ತಾಳಲಾರದೆ ಕೊಲೆ ಮಾಡುವುದರ ಮೂಲಕ ಇದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಆದರೆ ಇದರಲ್ಲಿ ಅಮಾಯಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಹೌದು, ಮಂಗಳೂರು (Mangalore) ನಗರದ ಬಿಜೈ ಕಾಪಿಕಾಡ್‌ನಲ್ಲಿ (Bijai Kapikad) ಈ ಒಂದು ಘಟನೆ ಸಂಭವಿಸಿದೆ ಸಂಭವಿಸಿದೆ. ನೆರೆಹೊರೆಯ ಮನೆಯವರಾದ ಸತೀಶ್ (Satish) ಹಾಗೂ ಮುರಳಿ ಪ್ರಸಾದ್ (Muruli Prasad) ಎಂಬುವವರ ನಡುವೆ ಜಗಳ ನಡೆದಿದ್ದು ಮುರುಳಿಯ ಬೈಕ್‌ಗೆ ಸತೀಶ್ ತನ್ನ ಕಾರಿನಿಂದ ಅಪಘಾತಪಡಿಸಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ. ಆದ್ರೆ ಇಬ್ಬರ ಜಗಳದ ನಡುವೆ ಡಿಕ್ಕಿ ಪಡಿಸುವ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬಂದ ಮಹಿಳೆಯೊಬ್ಬರಿಗೆ ಕೂಡ ಡಿಕ್ಕಿ ಹೊಡೆದಿದ್ದು, ಮಹಿಳೆ ಗಂಭೀರ ಗಾಯಗೊಂಡಿದ್ದಾಳೆ.

ಇನ್ನೂ ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮುರುಳಿಪ್ರಸಾದ್ ಮತ್ತು ಪಾದಾಚಾರಿ ಮಹಿಳೆಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಉರ್ವಾ ಠಾಣೆಯಲ್ಲಿ ಸತೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Comments are closed.