Honeytrap: ಬಿಜೆಪಿ ಮುಖಂಡನಿಗೆ ಹನಿಟ್ರ್ಯಾಪ್; ಯುವತಿ ಬಂಧನ!

Tumkur: ಬಿಜೆಪಿ ಮುಖಂಡ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿಗೆ ಹನಿಟ್ರ್ಯಾಪ್ ಮಾಡಿದ ಯುವತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ತುಮಕೂರಿನ ಕ್ಯಾತ್ಸಂದ್ರದ ನಿವಾಸಿ ನಿಶಾ ಹನಿಟ್ರ್ಯಾಪ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿಗೆ ಬೆತ್ತಲೆ ವಿಡಿಯೋ ಇಟ್ಟುಕೊಂಡು 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ. ನಂತರ ಸೋಷಿಯಲ್ ಮೀಡಿಯಾದಲ್ಲಿ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿ ಹಾಕಿದ್ದಾಳೆ. ಅಲ್ಲದೇ ಈಕೆ ಕಡೆಯ ಎರಡು ಹುಡುಗರು ಕೂಡಾ ಬೆದರಿಕೆ ಹಾಕಿದ್ದಾರೆ.
ಗುಬ್ಬಿ ಠಾಣೆಯಲ್ಲಿ ಅಣ್ಣಪ್ಪಸ್ವಾಮಿ ಈ ಕುರಿತು ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಶಾ ಮತ್ತು ಗ್ಯಾಂಗನ್ನು ಬಂಧನ ಮಾಡಿದ್ದಾರೆ.
ನಡೆದಿರುವುದೇನು?
ಮೊದಲಿಗೆ ಈಕೆ ಫೇಸ್‌ಬುಕ್ ಮೂಲಕ ಅಣ್ಣಪ್ಪಸ್ವಾಮಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ನಂತರ ಪರಿಚಯವಾಗಿದ್ದು, ಪ್ರತಿದಿನ ಮೆಸೇಜ್‌ಗಳ ಮೂಲಕ ಹತ್ತಿರವಾಗಿದ್ದಳು. ನಂತರ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಖಾಸಗಿ ಸಂದರ್ಭಗಳನ್ನು ಸೆರೆ ಹಿಡಿದಿದ್ದಾಳೆ. ನಂತರ ಬ್ಲ್ಯಾಕ್ ಮೇಲೆ ಮಾಡಿ ಲಕ್ಷ ಲಕ್ಷ ಹಣ ಪಡೆದಿದ್ದಳು.
Comments are closed.