Ranya Rao: ಚಿನ್ನ ಕಳ್ಳಸಾಗಾಣೆ ಪ್ರಕರಣ; ರನ್ಯಾ ರಾವ್‌ ವಿರುದ್ಧ ಸುಳ್ಳು ಸುದ್ದಿಗೆ ಕೋರ್ಟ್‌ ನಿರ್ಬಂಧ!

Share the Article

Ranya Rao: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ ವಿರುದ್ಧ ಸುಳ್ಳು ಸುದ್ದಿ ಪ್ರಕಟ ಮಾಡದಂತೆ ಬೆಂಗಳೂರು 15 ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ. ರನ್ಯಾ ರಾವ್‌ ತಾಯಿ ಹೆಚ್‌ ಪಿ ರೋಹಿಣಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಈ ಕುರಿತು ಪ್ರತಿವಾದಿ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಿ ಜೂನ್‌ 2 ಕ್ಕೆ ವಿಚಾರಣೆ ಮುಂದೂಡಿದೆ.

ವಿಮಾನ ನಿಲ್ದಾಣದಲ್ಲಿ ಪ್ರೊಟೋಕಾಲ್‌ ಲೋಪಕ್ಕೆ ಕುರಿತು ಆದೇಶ ಮಾಡಿದ ಸಿಐಡಿ ತನಿಖೆಯನ್ನು ಕರ್ನಾಟಕ ಸರಕಾರ ಹಿಂಪಡೆದಿದೆ. ಶಿಷ್ಟಾಚಾರ ಉಲ್ಲಂಘನೆ ಮತ್ತು ಐಪಿಎಸ್‌ ಅಧಿಕಾರಿ ರಾಮಚಂದ್ರರಾವ್‌ ಪಾತ್ರದ ತನಿಖೆಯನ್ನು ನಡೆಸಲು ಹೊರಡಿಸಿರುವ ಆದೇಶ ಮುಂದುವರಿಯಲಿದೆ. ಇದಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತಾರನ್ನು ನೇಮಕ ಮಾಡಲಾಗಿದೆ. ಎರಡೆರಡು ತನಿಖೆ ಬೇಡ ಎಂದು ಸಿಐಡಿ ಕೇಸ್‌ನ್ನು ವಾಪಾಸು ತೆಗೆದುಕೊಳ್ಳಲಾಗಿದೆ. ಒಂದು ತನಿಖೆ ಶಿಷ್ಟಾಚಾರ ಉಲ್ಲಂಘನೆ ಪ್ರಕರಣದಲ್ಲಿ ಆಗಲಿದೆ.

 

Comments are closed.