Mysore: ಚಿನ್ನದ ಸರಕ್ಕಾಗಿ ನೆರೆ ಮನೆಯ ಸ್ನೇಹಿತೆಯನ್ನು ಕೊಂದ ಮಹಿಳೆ

Share the Article

Mysore: ಚಿನ್ನದ ಆಸೆಗಾಗಿ ತನ್ನ ಸ್ನೇಹಿತೆಯನ್ನೇ ಮಹಿಳೆ ಕೊಂದ ಘಟನೆ ಮೈಸೂರಿನ ಕೆ.ಸಿ.ಬಡಾವಣೆಯಲ್ಲಿ ನಡೆದಿದೆ. ಮಾ.5 ರಂದು ನಡೆದ ಘಟನೆ ನಡೆದಿದ್ದು, ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು.

ಅದೇ ಬಡಾವಣೆಯ ನಿವಾಸಿ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಅವರು ಪೊಲೀಸ್‌ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿ.

ಸುಲೋಚನಾರನ್ನು ಮಾ.5 ರಂದು ಉಸಿರುಗಟ್ಟಿಸಿ ಶಕುಂತಲಾ ಕೊಲೆ ಮಾಡಿ ಮೃತದೇಹದ ಮೇಲೆ ಇದ್ದ ಚಿನ್ನದ ಸರ ಕಳಚಿ ಕೊಂಡು ಹೋಗಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದು ಹೋದರೆಂದು ಸುತ್ತಮುತ್ತಲರನ್ನು ನಂಬಿಸಿದ್ದಳು. ಪೊಲೀಸರು ಅನುಮಾನದಲ್ಲಿ ವಿಚಾರಣೆ ಮಾಡಿದಾಗ ನಿಜ ವಿಷಯ ಬೆಳಕಿಗೆ ಬಂದಿದೆ.

ಶಕುಂತಲಾ ಮತ್ತು ಸುಲೋಚನಾ ಇವರಿಬ್ಬರು ಒಂದೇ ಬೀದಿಯ ನಿವಾಸಿಗಳು. ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಸಾಲದ ಸುಳಿಯಲ್ಲಿ ಸಿಲುಕಿತ್ತು ಇವರ ಕುಟುಂಬ. ಹೀಗಾಗಿ ಈ ಕೃತ್ಯವೆಸಗಿದ್ದಾಳೆ. ಸುಲೋಚನಾ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಈ ಘಟನೆ ಕುರಿತು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.