Udupi: ನಟೋರಿಯಸ್‌ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಮೇಲೆ ಫೈರಿಂಗ್

Share the Article

Udupi: ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಮೇಲೆ ಫೈರಿಂಗ್‌ ಮಾಡಲಾಗಿದೆ.

ಮಣಿಪಾಲ ಇನ್ಸ್‌ಪೆಕ್ಟರ್‌ ದೇವರಾಜ್‌ ಅವರು ನಟೋರಿಯಸ್‌ ಗರುಡ ಗ್ಯಾಂಗ್‌ ಸದಸ್ಯನಾಗಿರುವ ಇಸಾಕ್‌ ಮೇಲೆ ಫೈರಿಂಗ್‌ ಮಾಡಿದ್ದಾರೆ. ಗುಂಡೇಟು ತಿಂದು ಗಾಯಗೊಂಡ ಇಸಾಕ್‌ನನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಕರಣವೇನು?
ಬೆಂಗಳೂರಿನ ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ  ಪುತ್ತೂರಿನ ಉದ್ಯಮಿಯ ಬಳಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಉಡುಪಿಯಲ್ಲಿ ಇರುವ ಕುರಿತು ಮಾ.4 ರಂದು ಪೊಲೀಸರು ಮಾಹಿತಿ ಪಡೆದಿದ್ದರು. ಹೀಗಾಗಿ ನೆಲಮಂಗಲ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದು, ಈ ಸಂದರ್ಭ ಥಾರ್‌ ಜೀಪ್‌ನಲ್ಲಿ ತಪ್ಪಿಸಲು ಇಸಾಕ್‌ ಪ್ರಯತ್ನ ಪಟ್ಟಿದ್ದು, ಈ ಸಮಯದಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಆರೋಪಿ ಇಸಾಕ್‌ ಪರಾರಿಯಾಗಿದ್ದ.

ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಸಾಕ್‌ ಪ್ರೇಯಸಿ ತಾಯಿಯನ್ನು ಬಂಧನ ಮಾಡಲಾಗಿದ್ದು, ಆಕೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌, ಆತನ ಪ್ರೇಯಸಿ ಕೂಡಾ ಥಾರ್‌ ಗಾಡಿಯಲ್ಲಿದ್ದು, ಆಕೆಯ ಬಂಧನವಾಗಿತ್ತು. ಈಕೆಯ  ವಿರುದ್ಧ ಕೂಡಾ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಯತ್ನ, ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರೇಯಸಿಯ ಬಂಧನವಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗೆಂದು ಮಣಿಪಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.

 

Comments are closed.