Udupi: ಟ್ಯಾಂಕರ್‌ನಿಂದ ಪೆಟ್ರೋಲ್‌ ಕಳವು ವೇಳೆ ಪೊಲೀಸ್‌ ದಾಳಿ: ಚಾಲಕನ ಬಂಧನ

Udupi: ಉಡುಪಿಯ (Udupi) ಸಿದ್ದಾಪುರ ಪೇಟೆ ಸಮೀಪದ ಸುಬ್ಬರಾವ್‌ ಕಾಂಪ್ಲೆಕ್ಸ್‌ ಪಕ್ಕ ಇರುವ ಸರ್ವಿಸ್‌ ಸ್ಟೇಷನ್‌ನಲ್ಲಿ ನಿರಂತರವಾಗಿ ಟ್ಯಾಂಕರ್‌ಗಳಿಂದ ಡೀಸೆಲ್‌ ಮತ್ತು ಪೆಟ್ರೋಲ್‌ ಕಳವು ಮಾಡುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್‌.ಡಿ. ಕುಲಕರ್ಣಿ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಪ್ರಮುಖ ಸೂತ್ರಧಾರ ವಿಜಯ ನಾಯ್ಕ ಪರಾರಿಯಾಗಿದ್ದು, ಟ್ಯಾಂಕರ್‌ ಚಾಲಕ ಜಯರಾಮ ಎಂಬಾತನನ್ನು ಬಂಧಿಸಲಾಗಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿಜಯ ನಾಯ್ಕ ಟೂರಿಸ್ಟ್‌ ವಾಹನ ಮತ್ತು ಸಿದ್ದಾಪುರದಲ್ಲಿ ಸರ್ವಿಸ್‌ ಸ್ಟೇಷನ್‌ನಲ್ಲಿ ಆಯಿಲ್‌ ದಂಧೆ ನಡೆಸಲಾಗುತ್ತಿತ್ತು.

ಶಂಕರನಾರಾಯಣ ಠಾಣೆ ಪಿಎಸ್‌ಐ ನಾಸೀರ್‌ ಹುಸೇನ್‌ ನೀಡಿದ ಮಾಹಿತಿಯಂತೆ ಡಿವೈಎಸ್‌ಪಿ ಎಚ್‌.ಡಿ. ಕುಲಕರ್ಣಿ ದಾಳಿ ನಡೆಸಿದಾಗ ವಿಜಯ ನಾಯ್ಕ ಮತ್ತು ಟ್ಯಾಂಕರ್‌ ಚಾಲಕ ಜಯರಾಮ ಭಾರತ್‌ ಪೆಟ್ರೋಲಿಯಂ ಟ್ಯಾಂಕರ್‌ ನಿಂದ ಡೀಸೆಲ್‌ ಕದಿಯುತ್ತಿದ್ದರು. ಮಂಗಳೂರು ನೋಂದಣಿಯ ಟ್ಯಾಂಕರ್‌, 1,020 ಲೀಟರ್‌ ಡೀಸೆಲ್‌, 30 ಲೀಟರ್‌ ಪೆಟ್ರೋಲ್‌, 3 ಪೈಪ್‌ಗ್ಳು, ಡೀಸೆಲ್‌ ತೆಗೆಯುವ ಲಿಫ್ಟ್ ಮೋಟಾರ್‌ ಇತ್ಯಾದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.