Gwalior: ಹೆಂಡತಿಯೊಂದಿಗೆ ಜಗಳ- ನಡು ರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡ ಯುವಕ

Gwalior: ಚಹಾ ಮಾರುತಿದ್ದ ಯುವಕನೊಬ್ಬ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿಕೊಂಡಂತಹ ಘಟನೆ ಗ್ವಾಲಿಯರ್ ನಲ್ಲಿ ನಡೆದಿದೆ.

ಹೌದು, ಚಹಾ ಮಾರಾಟಗಾರನೊಬ್ಬ ನಿನ್ನೆ ಸಂಜೆ 4 ಗಂಟೆಗೆ ಕಲೆಕ್ಟರೇಟ್ ಚೌಕಿ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ತಕ್ಷಣ ಅಲ್ಲಿದ್ದ ಸ್ಥಳೀಯರು ಬೆಂಕಿಯನೆಲ್ಲ ನಂದಿಸಿ ಅವನನ್ನು ಸ್ಟಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹೌದು, ಸಬೀರ್ ಎಂಬ ವ್ಯಕ್ತಿ ಗ್ವಾಲಿಯರ್ ನಿವಾಸಿಯಾಗಿದ್ದು, ಕಲೆಕ್ಟರೇಟ್ ಚೌಕಿ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾನೆ. ಆತ ತನ್ನ ಪತ್ನಿಯನ್ನು ಮದುವೆಯಾಗಿ 7 ವರ್ಷಗಳಾಗಿವೆ. ದಂಪತಿಗಳು 5 ಮತ್ತು 1 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ ಕುಟುಂಬವನ್ನು ಪೋಷಿಸಲು, ಸಬೀರ್ ತಹಸಿಲ್ ಬಳಿ ಒಂದು ಸಣ್ಣ ಚಹಾ ಅಂಗಡಿಯನ್ನು ನಡೆಸುತ್ತಿದ್ದ.
ವರದಿಗಳ ಪ್ರಕಾರ, ಸಬೀರ್ ಕೆಲವು ಸಮಯದಿಂದ ತನ್ನ ಹೆಂಡತಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಆಕೆಯೊಂದಿಗಿನ ತೀವ್ರ ವಾಗ್ವಾದ ಹೆಚ್ಚಾದ ನಂತರ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಜಗಳದ ಮಧ್ಯೆ, ಸಬೀರ್ ಪೆಟ್ರೋಲ್ ಬಾಟಲಿಯನ್ನು ತೆಗೆದುಕೊಂಡು ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಕೂಡಲೇ ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆತನ ಸ್ಥಿತಿ ಹದಗೆಟ್ಟ ನಂತರ, ವೈದ್ಯರು ಅವನನ್ನು ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲು ಸೂಚಿಸಿದರು. ಸದ್ಯ ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Comments are closed.