Air India: ಬಟ್ಟೆ, ಪ್ಲಾಸ್ಟಿಕ್ ತುಂಬಿದ್ದ ಟಾಯ್ಲೆಟ್ ಪೈಪ್ ಬ್ಲಾಕ್‌! ಏರ್‌ ಇಂಡಿಯಾ ವಿಮಾನ ಶಿಕಾಗೋಗೇ ವಾಪಸ್‌

Share the Article

Air India: ಶಿಕಾಗೋದಿಂದ ದೆಹಲಿಗೆ ಬರುತ್ತಿದ್ದ ಏರಿಂಡಿಯಾ ವಿಮಾನದ ಶೌಚಾಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬಟ್ಟೆ ತುಂಬಿ ಹೋಗಿದ್ದರ ಪರಿಣಾಮ ವಿಮಾನ ಮರಳಿ ಶಿಕಾಗೋದಲ್ಲೇ ಲ್ಯಾಂಡ್ ಅದ ಘಟನೆ ಮಾ.5ರಂದು ನಡೆದಿದೆ.

ಸುಮಾರು 300 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದೆಹಲಿಗೆ ತೆರಳಲು 5 ಗಂಟೆ ಆಗಸಕ್ಕೆ ಹಾರಿತ್ತು. ಆದರೆ ನಂತರ ಶಿಕಾಗೋಗೇ ಹಿಂದಿರುಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಹಿಂದಿರುಗಿದೆ ಎಂದು ಇಂಡಿಯಾ ಹೇಳಿದೆ. ಆದರೆ ಪ್ರಯಾಣಿಕರೊಬ್ಬರು, ‘ವಿಮಾನದಲ್ಲಿರುವ 12 ಶೌಚಾಲಯಗಳ ಪೈಕಿ 8 ಶೌಚಾಲಯಗಳು ಬ್ಲಾಕ್ ಆಗಿದ್ದವು. ಹೀಗಾಗಿ ವಿಮಾನ ಹಿಂದಿರುಗಿತ್ತು’ ಎಂದಿದ್ದಾರೆ.

ಪೈಪ್‌ಗಳಲ್ಲಿ ಪ್ಲಾಸ್ಟಿಕ್, ಬಟ್ಟೆ ತುಂಬಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.