Telangana: ಬಾಟಲಿ ಮುಚ್ಚಳ ನುಂಗಿ 9 ತಿಂಗಳ ಮಗು ಸಾವು!

Telangana: ಒಂಭತ್ತು ತಿಂಗಳ ಮಗುವೊಂದು ಆಟವಾಡುತ್ತಿದ್ದಾಗ ಬಾಟಲಿಯ ಮುಚ್ಚಳ ನುಂಗಿ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಉತ್ಕೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂಪು ಪಾನೀಯದ ಬಾಟಲಿಯ ಕ್ಯಾಪ್ ನುಂಗಿ 9 ತಿಂಗಳ ಗಂಡು ಮಗು ಸಾವಿಗೀಡಾಗಿದೆ. ರುದ್ರ ಆಯಾನ್ ಮೃತ ಪಟ್ಟ ಮಗು ಎಂದು ಗುರುತಿಸಲಾಗಿದೆ.
ಲಕ್ಸೆಟ್ಟಿಪೇಟೆ ಮಂಡಲದ ಕೊಮ್ಮಗುಡ ಗ್ರಾಮದಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಅಲ್ಲಿಗೆ ತನ್ನ ಕುಟುಂಬದೊಂದಿಗೆ ಹೋಗಿದ್ದಾಗ ಮಗು ಆಕಸ್ಮಿಕವಾಗಿ ತಂಪು ಪಾನೀಯದ ಕ್ಯಾಪನ್ನು ನುಂಗಿದೆ. ಇದು ಪೋಷಕರ ಗಮನಕ್ಕೆ ಬಂದಾಗ ಕೂಡಲೇ ಅವರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು.
ಚಿಕಿತ್ಸೆ ನೀಡಿದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ. ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು.
Comments are closed.