Home News Tumakuru: ಕಾಲೇಜ್ ಮುಗಿಯುತಿದ್ದಂತೆ ಹುಡುಗಿಯರ ಚಡ್ಡಿ ಕದಿಯುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಅರೆಸ್ಟ್!!

Tumakuru: ಕಾಲೇಜ್ ಮುಗಿಯುತಿದ್ದಂತೆ ಹುಡುಗಿಯರ ಚಡ್ಡಿ ಕದಿಯುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಅರೆಸ್ಟ್!!

Hindu neighbor gifts plot of land

Hindu neighbour gifts land to Muslim journalist

Tumakuru: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದಿಯುವಂತಹ ಕೆಲವು ಪುರುಷರ ಚಾಳಿ ಹೆಚ್ಚಾಗಿಬಿಟ್ಟಿದೆ. ಮಹಿಳೆಯರು ಹೊರಗಡೆ ಯಾವುದೇ ರೀತಿಯ ತಮ್ಮ ಒಳಉಡುಪುಗಳನ್ನು ಒಣಹಾಕುವಂತಿಲ್ಲ, ಕೆಲವು ಕಾಮ ಪಿಸಾಸುರರು ಅದನ್ನು ಎಗರಿಸಿ ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಇಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಅಂತೆಯೇ ಇದೀಗ ಈ ವಿಚಾರವಾಗಿ ಇಂಜಿನಿಯರ್ ವಿದ್ಯಾರ್ಥಿ ಒಬ್ಬ ಅರೆಸ್ಟ್ ಆಗಿದ್ದಾನೆ.

ಹೌದು, ತುಮಕೂರಿನ(Tumakuru) ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ ಎಂಬಾತ ಕಾಲೇಜು ಮುಗಿಯುತ್ತಿದ್ದಂತೆ ಹೊರಗಡೆ ಮಹಿಳೆಯರು ಬಿಸಿಲಿಗೆ ಒಣಗಿ ಹಾಕಿದಂತಹ ಒಳ ಉಡುಪುಗಳನ್ನು ಎಗರಿಸುತ್ತ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮೂಲತಃ ಚಿಕ್ಕನಾಯಕನಹಳ್ಳಿಯವನಾದ ಶರತ್ ತುಮಕೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. ತುಮಕೂರು ನಗರದ ಅಶೋಕನಗರ ಎಸ್‌ಐಟಿ ಬ್ಯಾಕ್ ಗೇಟ್ ಎಸ್ ಎಸ್ ಪುರಂ ಸೇರಿದಂತೆ ಹಲವೆಡೆ ಈತ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತಿಯಾದ ನೀಲಿ ಚಿತ್ರ ವೀಕ್ಷಣೆಯಿಂದ ಆತ ಈ ವ್ಯಸನಕ್ಕೆ ಇಳಿದಿದ್ದಾನೆ ಎಂದು ತಿಳಿದುಬಂದಿದೆ.