Bantwala: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್‌ ಕೊನೆಗೂ ಪತ್ತೆ!

Share the Article

Bantwala: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್‌ ಮಾ.8 ರ (ಇಂದು) ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಉಡಪಿಯ ಡಿ ಮಾರ್ಟ್‌ನಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಆತನನ್ನು ಬಂಟ್ವಾಳಕ್ಕೆ ಕರೆತರುತ್ತಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿ ದಿಗಂತ್‌ ಸುಮಾರು 10 ದಿನದ ಬಳಿಕ ಪತ್ತೆಯಾಗಿದ್ದಾನೆ.

ಫೆ.25 ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದೆಂದು ಮನೆಯಲ್ಲಿ ಹೇಳಿದ ವಿದ್ಯಾರ್ಥಿ ಅನಂತರ ದೇವಸ್ಥಾನಕ್ಕೆ ಹೋಗದೇ, ಇತ್ತ ಮನೆಗೂ ಮರಳದೆ ನಾಪತ್ತೆಯಾಗಿದ್ದ. ಅಲ್ಲದೇ ಆತನ ಚಪ್ಪಲಿಗಳು ಹಾಗೂ ಮೊಬೈಲ್‌ ಫೋನ್‌ ಮನೆಯ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.

ಇನ್ನು ದಿಗಂತ್‌ ತನ್ನ ತಾಯಿಗೆ ಕರೆ ಮಾಡಿ, ” ನಾನು ಉಡುಪಿಯಲ್ಲಿ ಸುರಕ್ಷಿತನಾಗಿದ್ದೇನೆ ಎಂದು ಹೇಳಿದ್ದಾನೆ. ನಾನಾಗಿ ಹೋಗಿಲ್ಲ, ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದ್ರು ಎಂದು ದಿಗಂತ್‌ ಹೇಳಿದ್ದಾನೆ ಎನ್ನಲಾಗಿದೆ. ಕೊನೆಗೂ 12 ದಿನಗಳಿಂದ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಒಂದು ಸುಖಾಂತ್ಯ ಕಂಡಿದೆ.

ಸದ್ಯಕ್ಕೆ ಪೊಲೀಸರು ದಿಗಂತ್‌ನನ್ನು ಬಂಟ್ವಾಳಕ್ಕೆ ಕರೆದುಕೊಂಡು ಬರುತ್ತಿದ್ದು, ಮಿಸ್ಸಿಂಗ್‌  ಆಗಿದ್ದೇಕೆ? ಎನ್ನುವ ಇನ್ನಷ್ಟು ವಿಚಾರ ತಿಳಿದು ಬರಬೇಕಿದೆ.

ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಕುರಿತಂತೆ ಸರಕಾರ ಮತ್ತು ಪೊಲೀಸ್‌ ಇಲಾಖೆ 40 ಕ್ಕೂ ಅಧಿಕ ಪೊಲೀಸರ ತಂಡ ಮಾಡಿ ತನಿಖೆ ಮಾಡುತ್ತಿತ್ತು. ಡಾಗ್‌ ಸ್ಕ್ಯಾಡ್‌, ಡ್ರೋನ್‌ ಕ್ಯಾಮೆರ ಬಳಕೆ ಸೇರಿ ಅನೇಕ ವಿಧವಾಗಿ ಹುಡುಕಾಟ ಮಾಡಲಾಗಿತ್ತು. ನೇತ್ರಾವತಿ ನದಿ ಸುತ್ತ ದೋಣಿಯಲ್ಲಿ ಕೂಡಾ ಹುಡುಕಾಟ ನಡೆಸಲಾಗಿತ್ತು. ಇದೀಗ ಉಡುಪಿಯ ಡಿ ಮಾರ್ಟ್‌ನಲ್ಲಿ ದಿಗಂತ್‌ ಪತ್ತೆಯಾಗಿದ್ದಾನೆ.

Bantwala: ನಾನಾಗಿ ಹೋಗಿಲ್ಲ, ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದ್ರು- ದಿಗಂತ್‌

Comments are closed.