Faridabad: ಮಗ-ಸೊಸೆಯಿಂದ ಚಪ್ಪಳಿಯಲ್ಲಿ ಥಳಿತ; ವೃದ್ಧ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ!

Share the Article

Faridabad: 67 ವರ್ಷದ ವೃದ್ಧರೊಬ್ಬರು 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಿದಾಬಾದ್‌ನ ಸೆಕ್ಟರ್‌ 88 ರ ಎಸ್‌ಆರ್‌ಎಸ್‌ ಹಿಲ್ಸ್‌ ಸೊಸೈಟಿಯಲ್ಲಿ ನಡೆದಿದೆ. ಕುಬೇರ್‌ನಾಥ್‌ ಶರ್ಮಾ ಎಂಬ ವೃದ್ಧರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮಗ ಮತ್ತು ಸೊಸೆಯ ಕಿರುಕುಳದಿಂದ ಬೇಸತ್ತು ಈ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಫೆ.22 ರಂದು ಈ ಘಟನೆ ನಡೆದಿದೆ. ಪೊಲೀಸರು ತನಿಖೆ ಮಾಡಿದಾಗ ಜೇಬಿನಲ್ಲಿ ಒಂದು ಸೂಸೈಡ್‌ ನೋಟ್‌ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಮಗ ಮತ್ತು ಸೊಸೆಯೇ ನನ್ನ ಸಾವಿಗೆ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. “ನಾನು ನನ್ನ ಸ್ವ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಯಾರೂ ತಳ್ಳಿಲ್ಲ. ಮಗ ಸೊಸೆ ಕೈಯಲ್ಲಿ ಚಪ್ಪಲಿ ಹೊಡೆತ ತಿಂದು ಬದುಕುವುದಕ್ಕಿಂತ ಸಾಯುವುದೇ ಮೇಲು, ಇದರಲ್ಲಿ ಯಾರದ್ದೂ ತಪ್ಪಿಲ್ಲ. ಎಲ್ಲವೂ ದೇವರ ಇಚ್ಛೆ” ಎಂದು ಬರೆದಿದ್ದಾರೆ.

ಭೂಪಾನಿ ಪೊಲೀಸರು ಈ ಸುಸೈಡ್‌ ನೋಟನ್ನು ಆಧರಿಸಿ ಮಗ ಮತ್ತು ಸೊಸೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲು ಮಾಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಫೋರ್‌ಮನ್‌ ಆಗಿ ನಿವೃತ್ತರಾಗಿದ್ದ ಶರ್ಮಾ ಅವರು ಮೂರು ವರ್ಷಗಳಿಂದ ಎಸ್‌ಆರ್‌ಎಸ್‌ ಹಿಲ್ಸ್‌ ಸೊಸೈಟಿಯಲ್ಲಿ ಮಗ ಮತ್ತು ಸೊಸೆ ಜೊತೆ ವಾಸ ಮಾಡುತ್ತಿದ್ದರು.

ಮಗ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದು, ಸೊಸೆ ಶಿಕ್ಷಕಿಯಾಗಿದ್ದಾಳೆ.

Comments are closed.