Uttar Pradesh: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಕೈಯಲ್ಲಿದ್ದ ʼಓಂʼ ಟ್ಯಾಟುವನ್ನು ಆಸಿಡ್‌ ಹಾಕಿದ ಕಾಮುಕರು

Share the Article

Uttar Pradesh: ಹದಿನಾಲ್ಕು ವರ್ಷದ ಬಾಲಕಿಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯನ್ನು ಅಪಹರಣ ಮಾಡಿ ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರ ಮಾಡಲಾಗಿದೆ. ನಾಲ್ವರು ಪುರುಷರು ಈ ದುಷ್ಕೃತ್ಯ ಮಾಡಿದ್ದು, ಒಬ್ಬನ ಬಂಧನ ಮಾಡಲಾಗಿದೆ. ಇತರ ಮೂವರು ತಲೆ ಮರೆಸಿಕೊಂಡಿದ್ದಾರೆ.

ಜನವರಿ 2 ರಂದು ಬಾಲಕಿ ಟೈಲರ್‌ ಮನೆಗೆ ಹೋಗುತ್ತಿದ್ದಾಗ ಈ ಅಪಹರಣ ಘಟನೆ ನಡೆದಿದೆ.

ಬಾಲಕಿಗೆ ಅಮಲು ಪದಾರ್ಥ ನೀಡಿ ಸಲ್ಮಾನ್‌, ಜುಬೈರ್‌, ರಶೀದ್‌ ಮತ್ತು ಆರಿಫ್‌ ಕಾರಿನಲ್ಲಿ ಬಲವಂತವಾಗಿ ಅಪಹರಣ ಮಾಡಿ ಪ್ರಜ್ಞಾಹೀನಗೊಳಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿ ಪದೇ ಪದೇ ಹಲ್ಲೆ ನಡೆಸಿದ್ದಾರೆ. ಆಕೆಯ ಕೈಯಲ್ಲಿದ್ದ ಓಂ ಹಚ್ಚೆಯನ್ನು ಆಸಿಡ್‌ನಿಂದ ಸುಟ್ಟು, ಬಲವಂತವಾಗಿ ಮಾಂಸವನ್ನು ತಿನ್ನಿಸಿದ್ದಾರೆ. ಹೇಗೋ ಬಾಲಕಿ ಮಾರ್ಚ್‌ 2 ರಂದು ಆಕೆ ಮನೆಗೆ ಮರಳಿದ್ದಾಳೆ. ನಂತರ ಆಕೆಯ ಕುಟುಂಬ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಇದರ ಜೊತೆಗೆ ಪ್ರಕರಣವನ್ನು ಹಿಂಪಡೆಯಲು ಬೆದರಿಕೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.

Comments are closed.