Putturu : ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಂಪಿಸಿದ ಭೂಮಿ – ಮನೆ ಬಿಟ್ಟು ಓಡಿದ ಜನ !!

Putturu : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸುತ್ತಮುತ್ತ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು ಜನರೆಲ್ಲರೂ ಭಯಭೀತರಾಗಿ ಮನೆಯಿಂದ ಓಡಿ ಬಂದಿದ್ದಾರೆ. ಅಷ್ಟೇ ಅಲ್ಲದೆ ಕೆಲಕಾಲ ಆತಂಕದಿಂದ ಬೀದಿಯಲ್ಲಿ ನಿಂತಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಮಾರು ಐದು ಗ್ರಾಮಗಳಲ್ಲಿ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಕೆಲ ಕಾಲ ಭೂಮಿ ಕಂಪಿಸಿದ್ದರಿಂದಾಗಿ ಜನರು ಭಯ ಭೀತರಾದರು ಎಂಬುದಾಗಿ ಹೇಳಲಾಗುತ್ತಿದೆ. ಆದರೇ ಪುತ್ತೂರು ವ್ಯಾಪ್ತಿಯ ಕಲ್ಲು ಕ್ವಾರಿಯಲ್ಲಿ ಸಂಗ್ರಹಿಸಿಟ್ಟಿದ್ದಂತ ಜಿಲೆಟಿನ್ ಕಡ್ಡಿಗಳು ಸ್ಪೋಟಗೊಂಡ ಪರಿಣಾಮ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
Comments are closed.