Home Crime UAE: ಮಗುವನ್ನು ಕೊಂದ ಅಪರಾಧ; ಗಲ್ಲಿಗೇರಿದ ಯುಪಿ ಮಹಿಳೆ

UAE: ಮಗುವನ್ನು ಕೊಂದ ಅಪರಾಧ; ಗಲ್ಲಿಗೇರಿದ ಯುಪಿ ಮಹಿಳೆ

Image Credit: New24

Hindu neighbor gifts plot of land

Hindu neighbour gifts land to Muslim journalist

UP Woman: ಫೆ.15 ರಂದು ಯುಎಇಯಲ್ಲಿ ಉತ್ತರ ಪ್ರದೇಶದ 33 ವರ್ಷದ ಮಹಿಳಾ ಕೇರ್‌ಟೇಕರ್‌ ಶಹಜಾದಿ ಖಾನ್‌ ರನ್ನು ಗಲ್ಲಿಗೇರಿಸಲಾಗಿರುವ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯ ಇಂದು (ಫೆ.3) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಶಿಶುವಿನ ಕೊಲೆ ಆರೋಪದ ಮೇಲೆ ಮಹಿಳೆಗೆ ಮರಣದಂಡನೆ ವಿಧಿಸಲಾಗಿತ್ತು. ಅಂತ್ಯಕ್ರಿಯೆ ಮಾಚ್‌ 5 ರಂದು ನಡೆಯಲಿದೆ.

ಡಿ.19,2022 ರಂದು ಪ್ರವಾಸಿ ವೀಸಾದಲ್ಲಿ ಅಬುಧಾಬಿಗೆ ಹೋಗಿದ್ದ ಮಹಿಳೆ ಮಗುವಿನ ಕೇರ್‌ಟೇಕರ್‌ ಆಗಿ ಕೆಲಸಕ್ಕೆ ಸೇರಿಸಲಾಗಿತ್ತು. ಫೆ.2023 ರಲ್ಲಿ ಕೆಲಸಕ್ಕೆ ನೇಮಿಸಿದ ದಂಪತಿಗಳು ತಮ್ಮ ಮಗುವಿಗೆ ಸಾವಿಗೆ ಕಾರಣ ಮಹಿಳೆ ಎಂದು ಆರೋಪ ಮಾಡಿದ್ದರು. ನಂತರ ಈಕೆಯ ಬಂಧನ ಮಾಡಲಾಗಿತ್ತು. ಜುಲೈ 31,2023 ರಂದು ಆಕೆಗೆ ಮರಣದಂಡನೆ ವಿಧಿಸಲಾಯಿತು. ಫೆ.28,2024 ರಂದು ನ್ಯಾಯಾಲಯವು ತೀರ್ಪನ್ನು ನೀಡಿತು.

ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಅದು ಸ್ವೀಕೃತವಾಗಿರಲಿಲ್ಲ. ಮಗುವಿಗೆ ವರ್ಷಗಟ್ಟಲೆ ಲಸಿಕೆ ನೀಡಿ ಕೊಂದಿದ್ದಾಳೆ ಎನ್ನುವ ಆರೋಪದಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಭಾರತೀಯ ರಾಯಭಾರ ಕಚೇರಿ ಮಹಿಳೆಯ ಅಂತ್ಯಕ್ರಿಯೆಗಾಗಿ ಅಬುಧಾಬಿಗೆ ಪ್ರಯಾಣದ ವ್ಯವಸ್ಥೆ ಮಾಡಲು ಕುಟುಂಬಕ್ಕೆ ಸಹಾಯ ಮಾಡುತ್ತಿದೆ.