

Telangana: ತೆಲಂಗಾಣದ ಮೆದ್ಚಲ್ ಜಿಲ್ಲೆಯ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ಸುಕನ್ಯಾ (35) ನಾಪತ್ತೆಯಾಗಿರುವ ಕುರಿತು ದೂರು ದಾಖಲು ಮಾಡಿದ್ದಾರೆ. ಫೆ.5 ರಂದು ದೂರು ದಾಖಲಾಗಿದೆ.
ಸುಕನ್ಯಾ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿ ಗೋಪಿ (22) ಎಂಬಾತನ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರ ಬೈಕ್‌ನಲ್ಲಿ ಪ್ರಯಾಣ ಮಾಡುವುದನ್ನು ಪತಿ ಜಯರಾಜ್ ಕಂಡಿದ್ದಾರೆ. ಮೆದ್ಚಲ್ ಆಕ್ಸಿಜನ್ ಪಾರ್ಕ್ ಬಳಿ ಅವರು ಮುಖಾಮುಖಿಯಾಗಿದ್ದಾರೆ. ಕೂಡಲೇ ಅಪಾಯದ ಮುನ್ಸೂಚನೆಯನ್ನು ಅರಿತು ಗೋಪಿ ಮತ್ತು ಸುಕನ್ಯಾ ಬೈಕ್‌ನ್ನು ಅಲ್ಲೇ ಬಿಟ್ಟು ಬಸ್ ಹತ್ತಿ ಪರಾರಿಯಾಗಿದ್ದಾರೆ.
ನಂತರ ಜಯರಾಜ್ ಪೊಲೀಸರನ್ನು ಸಂಪರ್ಕ ಮಾಡಿದ್ದು, ದೂರು ದಾಖಲು ಮಾಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.













