

Pune: ಪುಣೆಯಲ್ಲಿ ಯುವತಿಯೊಬ್ಬಳು ಕೋಳಿಯನ್ನು ಕ್ರೂರವಾಗಿ ಹೊಡೆದು, ನೆಲಕ್ಕೆ ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಕೋಳಿಗೆ ಪದೇ ಪದೇ ಹೊಡೆದು ನಂತರ ಅದನ್ನು ನೆಲಕ್ಕೆ ಎಸೆಯುವ ವೀಡಿಯೋ ಸೆರೆಯಾಗಿದೆ.
ಕೋಳಿ ತನ್ನನ್ನು ರಕ್ಷಿಸಿಕೊಳ್ಳಲು ಪರದಾಡಿದೆ. ಆದರೂ ಅದು ಯುವತಿಯ ಬಲಪ್ರದರ್ಶನದ ಮುಂದೆ ಸೋತು ಹೋಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಂಇ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿಯ ಕ್ರೌರ್ಯವನ್ನು ಖಂಡಿಸಿದ್ದಾರೆ. ಹಾಗೂ ಪ್ರಾಣಿ ಹಿಂಸೆ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.













