Uttam Mohanty: ಒಡಿಯಾದ ಹಿರಿಯ ನಟ ಉತ್ತಮ್‌ ಮೊಹಂತಿ ನಿಧನ

Share the Article

Uttam Mohanty: ಒರಿಯಾ (ಒಡಿಯಾ) ಚಿತ್ರರಂಗದ ಖ್ಯಾತ ನಟ ಉತ್ತಮ್ ಮೊಹಾಂತಿ ಅವರು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೊಹಾಂತಿ ಅವರ ಸೋದರಳಿಯ ಸಾವನ್ನು ಖಚಿತಪಡಿಸಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ ಸೇರಿದಂತೆ ಹಲವು ವ್ಯಕ್ತಿಗಳಿಂದ ನಟನಿಗೆ ಸಂತಾಪ ಸೂಚಿಸಿದ್ದಾರೆ. ಒಡಿಯಾದ ಹಿರಿಯ ನಟ ಉತ್ತಮ್ ಮೊಹಾಂತಿ ಅವರು ಗುರುವಾರ ಗುರುಗ್ರಾಮ್ ಆಸ್ಪತ್ರೆಯಲ್ಲಿ ಲಿವರ್ ಸಿರೋಸಿಸ್ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಒಡಿಯಾ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳ ಕಾಲ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದ ಏಕೈಕ ತಾರೆ ಮೊಹಂತಿ. ಅವರ ವಿಶಾಲವಾದ ಗ್ರಾಮೀಣ ಅಭಿಮಾನಿ ಬಳಗವು ಅವರಿಗೆ ಗ್ರಾಮೀಣ ಕಥೆಗಳೊಂದಿಗೆ ಅನೇಕ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ನೀಡಿತು. 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೊಹಾಂತಿ ಅವರು ಹಲವಾರು ಒಡಿಯಾ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಅತ್ಯುತ್ತಮ ನಟ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರನ್ನು ಅನೇಕ ಸಂಸ್ಥೆಗಳು ಒಡಿಯಾ ಸಿನಿಮಾದ ಜೀವಂತ ದಂತಕಥೆ ಎಂದು ಗೌರವಿಸಿವೆ.

Comments are closed.