Maharashtra: ಮೌಢ್ಯದ ಪರಮಾವಧಿ; 22 ದಿನದ ಮಗುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಹಾಕಿದ್ರು

Maharashtra: ಮಹಾರಾಷ್ಟ್ರದ ಅಮರಾವತಿಯಲ್ಲಿ ಪುಲ್ವಂತಿ ರಾಜು ಅಧಿಕಾರ್ ಎಂಬ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಸಂಬಂಧಿಕರು ಬಂದವರು ಮಗುವಿನ ಅನಾರೋಗ್ಯಕ್ಕೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ. ಮಗುವಿನ ಹೊಟ್ಟೆಗೆ 65 ಬಾರಿ ಬರೆ ಹಾಕಿದ್ದಾರೆ. ಮಗುವಿನ ಪೋಷಕರಾದ ರಾಜು ಅಧಿಕಾರ್ ಮತ್ತು ಅವರ ಪತ್ನಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಖೇದನೀಯ.

ಈ ಪ್ರದೇಶದಲ್ಲಿ ಇನ್ನೂ ಅಪಾಯಕಾರಿ ಮತ್ತು ಅವೈಜ್ಞಾನಿಕ ಪದ್ಧತಿ ನಡೆಯುತ್ತಿದೆ ಎಂಬುವುದಕ್ಕೆ ಇದೊಂದು ನಿದರ್ಶನ ಎಂದು ಹೇಳಬಹುದು.
ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಗಾಯದ ನೋವಿನ ತೀವ್ರತೆ ಮತ್ತು ಉಸಿರಾಟದ ತೊಂದರೆ ಉಂಟಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಹೊಟ್ಟೆಯ ಮೇಲೆ ಗಾಯಗಳಾಗಿರುವುದನ್ನು ಕಂಡ ವೈದ್ಯರು ಮಗುವಿಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ನಾಗ್ಪುರಕ್ಕೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
Comments are closed.