Kumbamela : ಮಹಾ ಕುಂಭಮೇಳಕ್ಕೆ ವೈಭವದ ತೆರೆ – ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? ಯಾವಾಗ?

Share the Article

Kumbamela: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್​ರಾಜ್​ಗೆ ದೇಶ-ವಿದೇಶಗಳಿಂದ ಬಂದ 63ಕೋಟಿಗೂ ಅಧಿಕ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಿದೆ. ಅಂದರೆ ಸುಮಾರು ಒಂದುವರೆ ತಿಂಗಳುಗಳ ಕಾಲ ಮಹಾಕುಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ.

 

 ಹೌದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳವು ಅತ್ಯಂತ ವೈಭವ ಪೂರ್ವಕವಾಗಿ ತೆರೆ ಕಂಡಿದೆ. ಹಾಗಾದರೆ ಇನ್ನು ಮುಂದಿನ ಕುಂಭ ನಡೆಯುವುದು ಎಲ್ಲಿ? ಯಾವಾಗ? ಎಂಬುದು ಹಲವರ ಕುತೂಹಲದ ಪ್ರಶ್ನೆ. ಅದಕ್ಕೆ ಇಲ್ಲಿದೆ ನೋಡಿ ಉತ್ತರ.

 

ಮುಂದಿನ ಪೂರ್ಣ ಕುಂಭಮೇಳವು ಮಹಾರಾಷ್ಟ್ರದ ನಾಸಿಕ್ ನಲ್ಲಿ 12 ವರ್ಷಗಳ ನಂತರ 2027ರಲ್ಲಿ ನಡೆಯಲಿದೆ. ಆಧ್ಯಾತ್ಮಿಕ ಮತ್ತು ಪೌರಾಣಿಕ ಮಹತ್ವಕ್ಕೆ ಹೆಸರುವಾಸಿಯಾದ ನಾಶಿಕ್, ಸಿಂಹಸ್ಥ ಕುಂಭಮೇಳವನ್ನು ಆಯೋಜಿಸುತ್ತದೆ, ಪ್ರಾಥಮಿಕವಾಗಿ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ.

 

 ಇನ್ನು ಮುಂದಿನ ಮಹಾಕುಂಭಮೇಳದ ಕುರಿತಾಗಿ ಮಹಾರಾಷ್ಟ್ರದ ಸಿಎಂ ದೇವೇಂದ್ರ ಪಟ್ಟಣವಿಸ್ ಅವರು ಪ್ರತಿಕ್ರಿಯಿಸಿದ್ದು ನಾಶಿಕ್‌ನಲ್ಲಿ ಕುಂಭಮೇಳವು 17 ನೇ ಶತಮಾನದಿಂದ ನಡೆಯುತ್ತಿದೆ ಎಂದು ನಂಬಲಾಗಿದೆ ಮತ್ತು ಲಕ್ಷಾಂತರ ಭಕ್ತರು ಭಾಗವಹಿಸುವ ಭವ್ಯತೆಗೆ ಹೆಸರುವಾಸಿಯಾಗಿದೆ. ಮುಂದಿನ ಬಾರಿ ತಾವೇ ಕುಂಭ ಮೇಳವನ್ನು ಆಯೋಜಿಸುವುದಾಗಿ ತಿಳಿಸಿದ್ದಾರೆ.

Comments are closed.