Chennai: 3 ವರ್ಷದ ಮಗುವಿನ ಮೇಲೆರಗಿದ ಅಪ್ರಾಪ್ತ; ವಿರೋಧ ಮಾಡಿದ್ದಕ್ಕೆ ಮುಖ ವಿರೂಪ

Share the Article

Chennai: ಅಪ್ರಾಪ್ತ ಯುವಕನೋರ್ವ 3 ವರ್ಷದ ಮುಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಗು ವಿರೋಧ ಮಾಡಿದ್ದಕ್ಕೆ ಮಗುವಿನ ಮುಖವನ್ನೇ ವಿರೂಪಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. 16 ವರ್ಷದ ಅಪ್ರಾಪ್ತ ಈ ರೀತಿಯ ಅಟ್ಟಹಾಸ ಮೆರೆದಿದ್ದಾನೆ. ಮಗುವಿನ ಮುಖವನ್ನು ವಿರೂಪಗೊಳಿಸಿದ ಘಟನೆ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸೀರ್ಕಾಳಿ ಪಟ್ಟಣದಲ್ಲಿ ನಡೆದಿದೆ.

ಅಂಗನವಾಡಿಯಿಂದ ಬಾಲಕಿ ಬರುತ್ತಿದ್ದ ಸಮಯದಲ್ಲಿ ಚಾಕಲೇಟ್‌ ನೀಡುವುದಾಗಿ ಹೇಳಿ ಆಕೆಯನ್ನು ಕರೆದೊಯ್ದ ಅಪ್ರಾಪ್ತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ. ಬಾಲಕಿ ಚೀರಾಡಿ ವಿರೋಧ ಮಾಡಿದ್ದಕ್ಕೆ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿದ್ದಾನೆ. ಇದರಿಂದ ಬಾಲಕಿಯ ಮುಖ, ಕಣ್ಣುಗಳಿಗೆ ಗಂಭೀರ ಗಾಯವಾಗಿದೆ. ಮಗು ಪ್ರಜ್ಞೆ ಕಳೆದುಕೊಂಡಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇತ್ತ ಪೋಷಕರು ಮಗು ಮನೆಗೆ ಬಾರದೆ ಇರುವುದನ್ನು ಕಂಡು ಹುಡುಕುತ್ತಿದ್ದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ದೊರಕಿದೆ. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಬಂಧನವಾಗಿದೆ.

Comments are closed.