Kolkatta: ಶವ ತುಂಬಿದ ಸೂಟ್‌ಕೇಸ್‌ ನದಿಗೆ ಎಸೆಯಲು ಬಂದ ಅಮ್ಮ-ಮಗಳು

Share the Article

Kolkatta: ಇಬ್ಬರು ಮಹಿಳೆಯರು ಶವ ತುಂಬಿದ್ದ ಸೂಟ್‌ಕೇಸನ್ನು ನದಿಗೆ ಎಸೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಮ್ಮ-ಮಗಳು ಇಬ್ಬರು ಸೇರಿ ಗಂಗಾನದಿಯಲ್ಲಿ ಸೂಟ್‌ಕೇಸನ್ನು ಬಿಸಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ತಾಯಿ ಆರತಿ ಘೋಷ್‌ ಮತ್ತು ಫಲ್ಗುಣಿ ಷೋಷ್‌ (ಮಗಳು) ಇಬ್ಬರನ್ನು ಬಂಧನ ಮಾಡಲಾಗಿದೆ. ಸೂಟ್‌ಕೇಸ್‌ನಲ್ಲಿದ್ದ ಮೃತದೇಹ ಫಲ್ಗುಣಿ ಘೋಷ್‌ ಅವರ ಮಾವನ ಸಹೋದರಿ ಸುಮಿತಾ ಘೋಷ್‌ (55) ಎಂದು ಗುರುತಿಸಲಾಗಿದೆ. ಮಹಿಳೆಯರು ನೀಲಿ ಬಣ್ಣದ ಟ್ರಾಲಿ ಬ್ಯಾಗ್‌ನೊಂದಿಗೆ ಉತ್ತಮ ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದಲ್ಲಿ ಬೆಳಗ್ಗೆ 8 ಗಂಟೆಯಂದು ಕಾಣಿಸಿಕೊಂಡಿದ್ದರು.

ಸ್ಥಳೀಯರು ಇವರನ್ನು ಕಂಡು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಮಹಿಳೆಯ ರಕ್ತಸಿಕ್ತ ಶವ ಪತ್ತೆಯಾಗಿದೆ. ಅನಂತರ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿ ಬಂಧನ ಮಾಡಲಾಯಿತು.

ವಿಚಾರಣೆಯಲ್ಲಿ ಮೃತ ಸುಮಿತಾ ತನ್ನ ಮಾವನ ಸಹೋದರಿ. ಸುಮಿತಾ ಪತಿಯಿಂದ ಬೇರ್ಪಟ್ಟಿದ್ದು, ಫೆ.11 ರಿಂದ ತಮ್ಮ ನಿವಾಸದಲ್ಲಿ ವಾಸ ಮಾಡುತ್ತಿದ್ದರು. ಸೋಮವಾರ ಸಂಜೆ ಫಲ್ಗುಣಿ ಜೊತೆ ವಾಗ್ವಾದ ನಡೆದಿದೆ. ಫಲ್ಗುಣಿ ಮೃತಳನ್ನು ಗೋಡೆಗೆ ತಳ್ಳಿದ್ದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಅನಂತರ ಪ್ರಜ್ಞೆ ಮರಳಿ ಬಂದಾಗ ಮತ್ತೆ ಜಗಳ ನಡೆಯಿತು. ಫಲ್ಗುಣಿ ಅವಳ ಮುಖ ಮತ್ತು ಕುತ್ತಿಗೆಗೆ ಇಟ್ಟಿಗೆಯಿಂದ ಹೊಡೆದ ಕಾರಣ ಆಕೆ ಸಾವಿಗೀಡಾದಳು. ನಂತರ ಅಮ್ಮ ಮಗಳು ಟ್ರಾಲಿ ಬ್ಯಾಗಿನಲ್ಲಿ ಹಾಕಿ ನದಿಗೆ ಎಸೆಯಲು ಪ್ರಯತ್ನ ಪಟ್ಟರು.

Comments are closed.