Mysore: ಮೈಸೂರು ಚಾಮುಂಡಿ ಬೆಟ್ಟದಲ್ಲಿ 200 ಎಕರೆ ಅರಣ್ಯ ಬೆಂಕಿಗಾಹುತಿ

Share the Article

Mysore: ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 200 ಎಕರೆ ಅರಣ್ಯ ಭಸ್ಮವಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಉತ್ತನಹಳ್ಳಿ ಭಾಗದಲ್ಲಿ ಬೆಂಕಿ ಹೊತ್ತಿ ಲಲಿತಾದ್ರಿಪುರ ಭಾಗದವರೆಗೂ ಹರಡಿತ್ತು. ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಶರವೇಗದಲ್ಲಿ ಬೆಟ್ಟದೆಲ್ಲೆಡೆ ಹಬ್ಬಿತ್ತು.

ಸತತ 4 ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಒಂದು ಕಡೆ ಬೆಂಕಿ ಆರಿಸಿದರೆ, ಇನ್ನೊಂದು ಕಡೆ ಕಾಣಿಸುಕೊಳ್ಳುತ್ತಿದ್ದು, ಗಾಳಿ ಪದೇ ಪದೇ ಬೀಸುತ್ತಿದ್ದು, ಬೆಂಕಿ ನಂದಿಸಲು ಕಷ್ಟವಾಗಿತ್ತು.

ಸಂಜೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರೂ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಲೇ ಇತ್ತು.

Comments are closed.