Mexico: ಸಮುದ್ರ ತೀರದಲ್ಲಿ ಪತ್ತೆಯಾಯ್ತು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು !! ಯಾವುದಿದು ಮೀನು?

Mexico: ಸಮುದ್ರದ ದಂಡೆಯಲ್ಲಿ ಒಂದು ವಿಚಿತ್ರ ಮೀನು ಕಾಣಿಸಿಕೊಂಡಿದ್ದು ಇದು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಈ ಮೀನು ಕಾಣಿಸಿಕೊಂಡರೆ ಬ್ರಹ್ಮಾಂಡದ ಅಂತ್ಯ ಖಂಡಿತ ಆಗುತ್ತದೆ ಎಂಬ ನಂಬಿಕೆ ಕೂಡ ಇದೆ ಎನ್ನಲಾಗುತ್ತಿದೆ.

ಹೌದು, ಮೆಕ್ಸಿಕೊದ ಬಾಜಾ ಕ್ಯಾಲಿಫೋರ್ನಿಯಾ ಸುರ್‌ ಎಂಬ ಬೀಚ್‌ನಲ್ಲಿ ಇತ್ತೀಚೆಗೆ ಕಂಡು ಬಂದ ಮೀನೊಂದು ಈ ಜಗತ್ತು ಅಂತ್ಯವಾಗುವ ಮುನ್ಸೂಚನೆ ಎಂಬ ಭೀತಿಯನ್ನು ಸೃಷ್ಟಿಸಿದೆ. ವಿಚಿತ್ರ ಅಂದರೆ ಈ ಮೀನನ್ನು ಜನರು ಕರೆಯುವುದೇ ಡೂಮ್ಸ್‌ಡೇ ಮೀನು ಎಂದು. ಅಂದರೆ ಬ್ರಹ್ಮಾಂಡದ ಅಂತ್ಯವನ್ನು ಸೂಚಿಸುವ ಮೀನು ಎಂಬರ್ಥದಲ್ಲಿ.

ಸಮುದ್ರದಲ್ಲಿ ಸುಮಾರು 1000 ಮೀಟರ್‌ನಷ್ಟು ಆಳದಲ್ಲಿ ವಾಸಿಸುವ ಈ ವಿಚಿತ್ರ ಆಕಾರದ ತಿಳಿನೀಲಿ ಬಣ್ಣದ ಮೀನು ದಡಕ್ಕೆ ಬರುವುದೇ ಇಲ್ಲ, ಬಂದರೂ ಜನರ ಕಣ್ಣಿಗೆ ಬೀಳುವುದಿಲ್ಲ. ಹೀಗಿರುವಾಗ ಹಗಲು ಹೊತ್ತಿನಲ್ಲೇ ದಡದಲ್ಲಿ ಕಾಣಿಸಿಕೊಂಡಿರುವುದು ವಿನಾಶದ ಮುನ್ಸೂಚನೆ ಎಂದು ಜನರು ಹೇಳುತ್ತಿದ್ದಾರೆ. ಅಲ್ಲದೆ ಇದು ಜನರ ಕಣ್ಣಿಗೆ ಬೀಳುವುದೇ ಇಲ್ಲ, ಎಲ್ಲಾದರೂ ಕಂಡು ಬಂದರೆ ಜಗತ್ತಿನ ಅಂತ್ಯದ ಮುನ್ಸೂಚನೆ ಎಂಬ ನಂಬಿಕೆ ಪಾಶ್ಚಾತ್ಯರಲ್ಲಿದೆ.

ಇನ್ನು ಈ ಮೀನು ಇತ್ತೀಚೆಗೆ ಮೆಕ್ಸಿಕೊದ ಬೀಚ್‌ನಲ್ಲಿ ಕಂಡುಬಂದಿದ್ದು, ಜನರು ಇದರ ವೀಡಿಯೊ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಈ ಮೀನು ಈಗ ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಅನೇಕ ಮಂದಿ ಜಗತ್ತಿನ ಅಂತ್ಯ ಸಮೀಪಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೂರ್ಣವಾಗಿ ಬೆಳೆದರೆ 11 ಮೀಟರ್‌ ಉದ್ದವಾಗುವ ಇದು ಥಟ್ಟನೆ ನೋಡುವಾಗ ಉದ್ದದ ರಿಬ್ಬನ್‌ನಂತೆ ಕಾಣುತ್ತದೆ. ಅದಕ್ಕೆ ಕೆಂಪನೆ ರೆಕ್ಕೆಗಳಿವೆ. ಹೇಗೆ ನೋಡಿದರೂ ಇದು ಮೀನಿನಂತೆ ಕಾಣುವುದಿಲ್ಲ. ಜಗತ್ತಿನ ವಿನಾಶದ ಮುನ್ಸೂಚಕ ಎಂಬ ಕುಖ್ಯಾತಿ ಈ ಮೀನಿಗಿದ್ದರೂ ಇದು ಜನರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಬಹಳ ಅಪರೂಪಕ್ಕೊಮ್ಮೆ ಕಾಣಿಸುವ ಕಾರಣ ಈ ಮೀನಿನ ಸುತ್ತ ನಂಬಿಕೆಗಳು ಬೆಳೆದುಬಂದಿವೆ.

Comments are closed.