Mysore: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ

Share the Article

Mysore: ಬೇಸಿಗೆ ಕಾಲ ಬಂತೆಂದರೆ ಅರಣ್ಯದಲ್ಲಿ ಬೆಂಕಿ ಕಾಣಿಸುವುದು ಸಾಮಾನ್ಯ. ಈಗಾಗಲೇ ಬೇಸಿಗೆ ಬಿಸಿ ಹೆಚ್ಚಿರುವುದರಿಂದ ಇಂದು (ಶುಕ್ರವಾರ ಫೆ.21) ಚಾಮುಂಡಿ ಬೆಟ್ಟದಲ್ಲಿ ಕೂಡಾ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಉತ್ತನಹಳ್ಳಿಗೆ ಹೋಗುವ ಮಾರ್ಗದಲ್ಲಿ ಅಂದರೆ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುರುಚಲು ಗಿಡ ಆಗಿರುವುದರಿಂದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಹಾಗಾಗಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕಿಡಿಗೇಡಿಗಳು ಹಚ್ಚಿದಾರೆಯೇ ಅಥವಾ ಆಕಸ್ಮಿಕವಾಗಿ ಈ ಘಟನೆ ನಡೆದಿದೆಯೇ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅಗ್ನಿ ಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿಗಳು ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಚಾಮುಂಡಿಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಉತ್ತನಹಳ್ಳಿ ಸಂಪರ್ಕಿಸುವ ರಸ್ತೆ ಬಳಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಮುಂಡಿ ಬೆಟ್ಟದ ರಸ್ತೆಯುದ್ದಕ್ಕೂ ಹೊಗೆ ಆವರಿಸಿಕೊಂಡಿದೆ.

ಸಾಕಷ್ಟು ಅರಣ್ಯ ಪ್ರದೇಶವಿರುವುದರಿಂದ ಎಲ್ಲಾ ಅರಣ್ಯ ನಾಶ ವಾಗಬಹುದು. ಇದೀಗ ಮೊದಲ ಆದ್ಯತೆಯಾಗಿ ಬೆಂಕಿ ನಂದಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ನಿರತರಾಗಿದ್ದಾರೆ. ಬೆಂಕಿಯನ್ನು ಹಚ್ಚಲಾಗಿದ್ದು ಆಕಸ್ಮಿಕವೇ? ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೇ ಎನ್ನುವುದು ಅನಂತರ ತನಿಖೆ ಮೂಲಕ ತಿಳಿದು ಬರಲಿದೆ.

Comments are closed.