Sandalwood News: ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಟ್ವಿಸ್ಟ್‌, ಸಂಚಲನ ಮೂಡಿಸಿದ ಆಡಿಯೋ

Share the Article

Sandalwood News: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ರೆಕಾರ್ಡ್‌ವೊಂದು ವೈರಲ್‌ ಆಗಿದೆ. ಗುರುಪ್ರಸಾದ್‌ ಆತ್ಮಹತ್ಯೆಗೂ ಮೊದಲು 2 ನೇ ಪತ್ನಿ ಸುಮಿತ್ರಾ ಜೊತೆಗೆ ಮಾತಾಡಿರುವ ಮೊಬೈಲ್‌ ಸಂಭಾಷಣೆಯೊಂದು ವೈರಲ್‌ ಆಗಿದ್ದು, ಹೊಸ ತಿರುವನ್ನು ಪಡೆದುಕೊಂಡಿದೆ.

ಗುರುಪ್ರಸಾದ್‌ ಮತ್ತು ಸುಮಿತ್ರಾ ಸಂಭಾಷಣೆಯಲ್ಲಿ ʼ ನನಗಿರುವ ಒತ್ತಡ ನಿಮಗೆ ಕಲ್ಪನೆ ಇಲ್ಲ ಎಂದು ಅವತ್ತೇ ಹೇಳಿದ್ದೇನೆ. ನನ್ನ ಜೊತೆ ಇದ್ರಿ, ಮನೆಗೂ ಬಂದಾಯ್ತು, ಯಾರೋ ಸತ್ತರು ಎಂದು ನಿಮ್ಮನೆಗೆ ಹೋದ್ರಿ, ನಾನು ಕೂಲಿ ತರ ಇಲ್ಲಿ ಸಾಯ್ತಿದ್ದೀನಿ. ಇಷ್ಟರಲ್ಲೇ ಮಗುಗೆ ಹುಷಾರಿಲ್ಲ ಎಂದು ಸಮಸ್ಯೆ ಸೃಷ್ಟಿಸಿ ಬಂದೇ ಬರ್ತೀರಿ ಎಂದು ನನಗೆ ಗೊತ್ತಿತ್ತು. ನಾನು ದರ್ಶನ್‌, ಅವರಿವರ ರೀತಿ ಇಲ್ಲ. ನನ್ನ ಬಳಿ ದುಡ್ಡಿಲ್ಲ. ದುಡ್ಡಿದ್ದರೂ ಹಂಗೆಲ್ಲ ಮಾಡಲ್ಲ. ನೀವು ಇದುವರೆಗೆ ನಮಗೆ ಎಷ್ಟು ಲಾಸ್‌ ಮಾಡಿದ್ದೀರಿ ಎಂದು ನಿಮಗೆ ಕಲ್ಪನೆಯೂ ಇಲ್ಲ. ನನ್ನ ಮೊಬೈಲ್‌ ಸೇರಿ ಎಲ್ಲವನ್ನೂ ಇಟ್ಟುಕೊಂಡು ನನ್ನನ್ನು ಕಂಟ್ರೋಲ್‌ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೀರಿ. ನನ್ನನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳೋಕೆ ಆಗೋದಿಲ್ಲ. ಇದ್ದರೆ ನಾನು ಸಾಯುವುದರೊಳಗೆ ಒಂದಷ್ಟು ಸಂಪಾದನೆ ಮಾಡಿ ಕೊಟ್ಟು ಬಿಟ್ಟು ಸತ್ತರೆ ಸಾಕಾಗಿದೆ. ನನ್ನ ಕೆಲಸ ಮುಗಿಸಿ ಕೊಡೋರಿಗೆ ಕೊಟ್ಟುಬಿಟ್ಟು, ಒಂದಷ್ಟು ಉಳಿಸಿ ನಿಮಗೆ-ಮಗಳಿಗೆ ಒಂದಷ್ಟು ದುಡ್ಡು ಕೊಟ್ಟು ಅವತ್ತು ರಾತ್ರಿಯೇ ಸಾಯಬೇಕು ಎಂದುಕೊಂಡಿರೋದೇ ನನ್ನ ಆಸೆ ಎಂದು ವೈರಲ್‌ ಆಡಿಯೋದಲ್ಲಿದೆ.

ಈ ಆಡಿಯೋಗೆ ಗುರುಪ್ರಸಾದ್‌ ಪತ್ನಿ ಸುಮಿತ್ರಾ ಸ್ಪಷ್ಟನೆ ನೀಡಿದ್ದಾರೆ. ಸಾಯೋದಕ್ಕೂ ಮುನ್ನ ಕಳಿಸಿರೋ ಆಡಿಯೋ ಅದಲ್ಲ. ತುಂಬ ದಿನಗಳ ಹಿಂದೆ ಮಾತಾಡಿರುವ ಆಡಿಯೋ ಅದು ಎಂದು ಹೇಳಿದ್ದಾರೆ. ನನ್ನ ಮತ್ತು ಗುರುಪ್ರಸಾದ್‌ಗೆ ಕಪ್ಪು ಚುಕ್ಕೆ ತರುವ ಪ್ರಯತ್ನ ಇದು ಎಂದು ಹೇಳಿದ್ದಾರೆ.

Comments are closed.