Mandya: ಪತಿಯ ಅನೈತಿಕ ಸಂಬಂಧ; ಜಿಮ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಪತ್ನಿ

Share the Article

Mandya: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಪತಿ ನಡೆಸುತ್ತಿದ್ದ ಜಿಮ್‌ನಲ್ಲಿ ಪತ್ನಿ ದಿವ್ಯಾ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಗಿರೀಶ್‌ ಎಂಬಾತ, ವೈಭವ ಹೆಸರಿನ ಜಿಮ್‌ ನಡೆಸುತ್ತಿದ್ದು, ಈತನಿಗೆ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇತ್ತು ಎನ್ನುವ ಶಂಕೆ ಪತ್ನಿಗಿತ್ತು. ಇದರಿಂದ ಮನನೊಂದು ದಿವ್ಯಾ ಜಿಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅಳಿಯನೇ ತನ್ನ ಮಗಳನ್ನು ಹೊಡೆದು ಕೊಂದಿದ್ದಾನೆ ಎಂದು ದಿವ್ಯಾ ಕುಟುಂಬದವರು ಆರೋಪ ಮಾಡಿದ್ದು, ಜಿಮ್‌ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಸಂಬಂಧಿಕರನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಿದ್ದಾರೆ. ಇತ್ತ ದಿವ್ಯಾಳ ಪತಿ ಗಿರೀಶ್‌, ತಾಯಿ ವಿರುದ್ಧ ಮೃತಳ ಕುಟುಂಬದವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅಳಿಯ ಆಕೆಗೆ ಕಿರುಕುಳ ನೀಡುತ್ತಿದ್ದು, ಆತನ ಕಿರುಕುಳ ಸಹಿಸದೇ ಮಗಳು ಮೃತಪಟ್ಟಿದ್ದಾಳೆ, ಆತನನ್ನು ಬಂಧನ ಮಾಡುವಂತೆ ದಿವ್ಯಾಳ ಪೋಷಕರು ಒತ್ತಾಯ ಮಾಡಿದ್ದಾರೆ.

Comments are closed.