BJP MP Hema Malini: ಕುಂಭಮೇಳ ಕಾಲ್ತುಳಿತ ʼದೊಡ್ಡ ಘಟನೆಯೇನಲ್ಲʼ ಎಂದ ಹೇಮಾ ಮಾಲಿನಿ

Share the Article

BJP MP Hema Malini: ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಯ ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಇಂದು (ಮಂಗಳವಾರ) ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಘಟನೆಯನ್ನು “ದೊಡ್ಡದಾಗಿ ಬಿಂಬಿಸಲಾಗುತ್ತಿದೆ” ಎಂದು ಹೇಮಮಾಲಿನಿ ಅವರು ಹೇಳಿದ್ದಾರೆ.

ಮೌನಿ ಅಮವಾಸ್ಯೆಯಂದು (ಜ.29) ಸಂಭವಿಸಿದ ಕಾಲ್ತುಳಿತದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಪ್ರಯಾಗ್‌ರಾಜ್‌ನ ಸಂಗಮ್‌ ಪ್ರದೇಶದಲ್ಲಿ ಈ ಘಟನೆ ಬೆಳಗಿನ ಜಾವ ನಡೆದಿದ್ದು, ಉತ್ತರ ಪ್ರದೇಶ ಸರಕಾರ ಅಧಿಕೃತ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಕನಿಷ್ಠ 30 ಜ ಪ್ರಾಣ ಕಳೆದುಕೊಂಡಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿತ್ತು.

“ನಾವು ಕುಂಭಕ್ಕೆ ಹೋಗಿದ್ದೆವು. ನಾವು ಸ್ನಾನ ಮಾಡಿದೆವು. ಅಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿತ್ತು. ಆದರೂ ಕಾಲ್ತುಳಿತ ನಡೆದಿದೆ. ಅದೇನು ದೊಡ್ಡ ಘಟನೆಯೇನಲ್ಲ. ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭಮೇಳವನ್ನು ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ. ತುಂಬಾ ಜನ ಬರುತ್ತಿದ್ದಾರೆ. ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ಆದರೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ” ಎಂದು ಹೇಮಮಾಲಿನಿ ಸಂಸತ್‌ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

Comments are closed.