Gujarath: ಗರ್ಲ್‌ಫ್ರೆಂಡ್‌ನ 4 ತಿಂಗಳ ಮಗುವನ್ನು ನೆಲಕ್ಕೆ ಬಡಿದು ಕೊಂದ 15 ವರ್ಷದ ಬಾಲಕ

Gujarath: ಮಾನವೀಯತೆಯೇ ತಲೆತಗ್ಗಿಸುವ ಸುದ್ದಿಯೊಂದು ಹೊರಬಿದ್ದಿದೆ. ತಾನು ಪ್ರೀತಿಸಿದ ಯುವತಿಗೆ ಮಗು ಇದೆ, ಈ ಕಾರಣದಿಂದ ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪಲ್ಲ ಎಂದು, ಆಕೆಯ ನಾಲ್ಕು ತಿಂಗಳ ಮಗುವನ್ನು ನೆಲಕ್ಕೆ ಬಡಿದು ಕೊಂದಿರುವ 15 ವರ್ಷದ ಹುಡುಗನನ್ನು ಬಂಧಿಸಲಾಗಿದೆ. ಈ ಘಟನೆ ಸೂರತ್‌ನ ಉಮರ್ಗಮ್‌ನಲ್ಲಿ ನಡೆದಿದೆ.

ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು 4 ತಿಂಗಳ ಮಗುವಿನ ಶವವನ್ನು ಹೊರತೆಗೆದಿದ್ದು, ನಂತರ ಹುಡುಗನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಪ್ರಕರಣದಲ್ಲಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗ
ಹುಡುಗಿ ಕೇರಳ ಮೂಲದವಳಾಗಿದ್ದು, ಈಕೆಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಈಕೆ ಗರ್ಭಿಣಿ ಎಂದು ತಿಳಿದಾಗ, ಗಂಡ ದೂರವಾಗಿದ್ದ. ಪೊಲೀಸರು ಹುಡುಗಿಯ ವಯಸ್ಸನ್ನು ತಿಳಿಸಿಲ್ಲ. ಹುಡುಗಿ ತನ್ನ ತಂಗಿಯೊಂದಿಗೆ ಗುರುಗ್ರಾಮದಲ್ಲಿ ನೆಲೆಸಿದ್ದಳು. ಇಲ್ಲಿ ಆಕೆಗೆ
15 ವರ್ಷದ ಹುಡುಗನ ಪರಿಚಯವಾಗಿದೆ. ನಂತರ ಇಬ್ಬರ ನಡುವೆ ರಿಲೇಷನ್‌ಷಿಪ್ ಬೆಳೆದಿದೆ. ಇವರಿಬ್ಬರು ಒಂದು ತಿಂಗಳ ಹಿಂದಷ್ಟೇ ಮುಂಬೈಗೆ ಬಂದಿದ್ದರು. ಮಗುವನ್ನು ಹುಡುಗನ ಆರೈಕೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಹುಡುಗ ಜನವರಿ 13 ರಂದು ಕೂಡಾ ಈಕೆ ಕೆಲಸಕ್ಕೆ ಹೋಗಿದ್ದಾಳೆ. ಆದರೆ ಸ್ವಲ್ಪ ಸಮಯದ ನಂತರ ಈತ ಮಗುವನ್ನು ಕೊಲೆ ಮಾಡಿ, ತನ್ನ ಕೈಯಿಂದ ಮಗು ಕೆಳಗೆ ಬಿದ್ದಿದೆ ಎಂದು ಹುಡುಗಿಗೆ ಸುಳ್ಳು ಹೇಳಿದ್ದಾನೆ. ಕೂಡಲೇ ಕೆಲಸದ ಸ್ಥಳದಿಂದ ಆಕೆ ಓಡಿ ಬಂದಿದ್ದಾಳೆ. ಹುಡುಗನ ಮಾತನ್ನು ನಂಬಿ ಆಕೆ, ಅಕ್ಕಪಕ್ಕದವರ ಸಹಾಯದಿಂದ ಮಗುವಿನ ಸಮಾಧಿ ಮಾಡಿದ್ದಾಳೆ. ಆದರೆ ಅನಂತರ ಈಕೆ ಬಾಯ್‌ಫ್ರೆಂಡ್ ನಾಪತ್ತೆಯಾಗಿದ್ದ. ಇದರಿಂದ ಅನುಮಾನಗೊಂಡ ಈಕೆ ಠಾಣೆಗೆ ತೆರಳಿ ದೂರನ್ನು ನೀಡಿದ್ದಳು.
ಜನವರಿ 15 ರಂದು ಹುಡುಗಿ ಪೊಲೀಸರಿಗೆ ದೂರು ನೀಡಿದ್ದು, ಶವವನ್ನು ಮರು ಪರೀಕ್ಷೆಗೆ ಒಳಪಡಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ತಲೆಗೆ ಗಂಭೀರ ಗಾಯಗಳಾಗಿದ್ದು, ಇದು ಕೊಲೆಯೇ ಹೊರತು ಅಪಘಾತವಲ್ಲ ಎಂಬುದು ಸಾಬೀತಾಗಿದೆ.
ಪ್ರೇಮಿ ಆರೋಪವನ್ನು ಒಪ್ಪಿಕೊಂಡಿದ್ದಾನೆ
ಕೊಲೆ ದೃಢಪಟ್ಟ ನಂತರ ಮತ್ತು ಮಹಿಳೆಯ ಆರೋಪದ ನಂತರ, ಪೊಲೀಸರು ಆರೋಪಿ ಹದಿಹರೆಯದವರನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಿಂದ ಬಂಧಿಸಿ ವಲ್ಸಾದ್‌ಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಮಗು ಸಾಯಿಸಿದ್ದು ನಾನೇ ಎಂದು ಒಪ್ಪಿದ್ದಾನೆ.
ಮಗುವಿನ ತಲೆಯನ್ನು ನೆಲಕ್ಕೆ ಬಡಿದು ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯುವಕ ತನ್ನ ಮನೆಯವರು ಮಗು ಹೊಂದಿರುವ ಯುವತಿಯನ್ನು ಮದುವೆಯಾಗಲು ಒಪ್ಪೋದಿಲ್ಲ ಎಂಬ ಕಾರಣಕ್ಕೆ ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹುಡುಗನ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಆತನನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Comments are closed.