Home News Naga Sadhu: ಕುಂಭಮೇಳದ ಬಳಿಕ ನಾಗ ಸಾಧುಗಳು ಎಲ್ಲಿ ಹೋಗುತ್ತಾರೆ? ಗೊತ್ತಾದ್ರೆ ನಿಜಕ್ಕೂ ಅಚ್ಚರಿಎನಿಸುತ್ತದೆ

Naga Sadhu: ಕುಂಭಮೇಳದ ಬಳಿಕ ನಾಗ ಸಾಧುಗಳು ಎಲ್ಲಿ ಹೋಗುತ್ತಾರೆ? ಗೊತ್ತಾದ್ರೆ ನಿಜಕ್ಕೂ ಅಚ್ಚರಿಎನಿಸುತ್ತದೆ

Hindu neighbor gifts plot of land

Hindu neighbour gifts land to Muslim journalist

Naga Sadhu: ಉತ್ತರ ಪ್ರದೇಶದ ಪ್ರಯಾಗ್ರಾಜನಲ್ಲಿ ನಡೆಯುತ್ತಿರುವ ಕುಂಭಮೇಳವು ಜಗತ್ತಿನ ಅತಿ ಅಪರೂಪದ ವಿದ್ಯಮಾನಗಳಲ್ಲಿ ಒಂದು. ಈ ಮಹಾಕುಂಭ(Mahakumha) ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದಾರೆ. ಸಾಧುಗಳು ಸಂತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆದರೆ ಈ ಇಡೀ ಮಹಾ ಕುಂಭದ ಪ್ರಮುಖ ಹೈಲೈಟ್ಸ್ ಎಂದರೆ ನಾಗಸಾಧುಗಳು. ಮಹಾ ಕುಂಭದಲ್ಲಿ ಲಕ್ಷ ಲಕ್ಷಗಟ್ಟಲೆ ನಾಗು ಸಾಧುಗಳು(Naga Sadhu) ಪ್ರತ್ಯಕ್ಷವಾಗಿದ್ದಾರೆ. ಹಾಗಿದ್ದರೆ ಮಹಾಕುಂಭದ ಬಳಿಕ ಇವರೆಲ್ಲರೂ ಎಲ್ಲಿಗೆ ಹೋಗುತ್ತಾರೆ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಇಲ್ಲಿದೆ ನೋಡಿ ಉತ್ತರ.

ಕುಂಭದ ನಂತರ ಅನೇಕ ನಾಗ ಸಾಧುಗಳು ಹಿಮಾಲಯ ಮತ್ತು ಇತರ ಏಕಾಂತ ಸ್ಥಳಗಳಿಗೆ ತೆರಳುತ್ತಾರೆ. ಅಲ್ಲಿ ಅವರು ಕಠಿಣ ತಪಸ್ಸು ಮಾಡುತ್ತಾರೆ ಮತ್ತು ಹಣ್ಣು-ತರಕಾರಿಗಳನ್ನು ತಿಂದು ಜೀವನ ಸಾಗಿಸುತ್ತಾರೆ. ಅವರ ತಪಸ್ವಿ ಜೀವನಶೈಲಿಯ ಉದ್ದೇಶ ಆತ್ಮಸಾಕ್ಷಾತ್ಕಾರ ಮತ್ತು ಆತ್ಮಜ್ಞಾನವನ್ನು ಪಡೆಯುವುದು.ಕೆಲವು ನಾಗ ಸಾಧುಗಳು ಕುಂಭದ ನಂತರ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ವಾಸಿಸುತ್ತಾರೆ. ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿ ಮುಂತಾದ ಸ್ಥಳಗಳಲ್ಲಿ ಅವರು ನೆಲೆಸುತ್ತಾರೆ, ಅಲ್ಲಿ ಅವರು ಧಾರ್ಮಿಕ ಸಾಧನೆಗಳಲ್ಲಿ ಮಗ್ನರಾಗಿರುತ್ತಾರೆ.

ಇನ್ನು ನಾಗ ಸಾಧುಗಳು ಧಾರ್ಮಿಕ ಯಾತ್ರೆಗೂ ಹೋಗುತ್ತಾರೆ. ಅವರು ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಜ್ಞಾನ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಾರೆ. ಈ ಯಾತ್ರೆಯ ಸಮಯದಲ್ಲಿ ಅವರು ಸತ್ಯ ಮತ್ತು ಮುಕ್ತಿಯನ್ನು ಹುಡುಕುತ್ತಿರುತ್ತಾರೆ.