

Pratap Simha: ಹಸುಗಳ ಕೆಚ್ಚಲು ಕೊಯ್ಯುವಂತಹ ಸಾಬಣ್ಣನ ಚಿತ್ರವೇ ಮುಂದೆ ಕಾಂಗ್ರೆಸ್ ಚಿಹ್ನೆ ಯಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha)ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯ ಬೆಳಕಿಗೆ ಬಂದಿತ್ತು. ಸದ್ಯಕ್ಕೆ ಇದು ಹಿಂದೂ ನಾಯಕರನ್ನು ಕೆರಳಿಸಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಲ್ಲದೆ ಆತನಿಗೆ ಜಾಮೀನನ್ನು ಕೂಡ ಮಂಜೂರು ಮಾಡಲಾಗಿತ್ತು. ಇದೀಗ ಈ ಕುರಿತು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆಕ್ರೋಶ ವ್ಯಕ್ತಪಡಿಸಿ ‘ಹಸುಗಳ ಕೆಚ್ಚಲು ಕೊಯ್ಯುವಂತಹ ಸಾಬಣ್ಣನ ಚಿತ್ರವೇ ಮುಂದೆ ಕಾಂಗ್ರೆಸ್ ಚಿಹ್ನೆ ಯಾಗುತ್ತದೆ’ ಎಂದು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಹಸುಗಳ ಕೆಚ್ಚಲು ಕೊಯ್ದ ಆ ಸಾಬಣ್ಣ ಮಾನಸಿಕ ಅಸ್ವಸ್ಥನಲ್ಲ. ಆತನಿಗೆ ಸಿಂಪಲ್ಲಾಗಿ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾರೆ. ಅವನನ್ನು ರಕ್ಷಣೆ ಮಾಡಲಾಗುತ್ತಿದೆ. ಗೋಮಾಂಸ ಭಕ್ಷಣೆ ಮಾಡುವ ಸಾಬರಿಗೆ ಜನ್ಮದತ್ತವಾಗಿ ಬಂದಿರುವ ಕುತ್ತಿಗೆ ಸೀಳುವ ಕೆಲಸ ಬಿಟ್ಟು ಕೆಚ್ಚಲು ಸೇಡುವಂತಹ ಕೆಲಸ ಯಾಕೆ ಮಾಡುತ್ತಾನೆ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಇರುವವರೆಗೂ ಇದು ಮುಂದುವರೆಯುತ್ತಲೇ ಇದೆ. ಆದಷ್ಟು ಬೇಗ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ಕಿತ್ತರಿಯಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.













