Shocking : ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಕ್ರೌರ್ಯ – ಕರುವಿನ ಹೊಟ್ಟೆ ಬಗೆದ ದುರುಳರು !!

Share the Article

Shocking : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪೊಲೀಸರು ಈ ಹೀನ ಕೃತ್ಯ ಎಸಗಿದ್ದ ಆರೋಪಿಯನ್ನೂ ಸಹ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಮೈಸೂರಿನ ನಂಜನಗೂಡಿನಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ ಕರುವಿನ ಮೇಲೆ ವಿಕೃತಿ ಮೆರೆಯಲಾಗಿದೆ.

ಹೌದು, ನಂಜನಗೂಡಿನಲ್ಲಿ ದೇವಸ್ಥಾನಕ್ಕೆ ಹರಕೆಗೆ ಬಿಟ್ಟ ಕರುವಿನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಾಯಗೊಳಿಸಿ ವಿಕೃತಿ ಮೆರೆದ ಕರುವಿನ ಹಿಂಬದಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದ್ದು, ಬಾಲ ಕಟ್ ಆಗುವ ಸ್ಥಿತಿಯಲ್ಲಿದೆ.

ಅಲ್ಲದೆ ಇಂತಹದ್ದೇ ಮತ್ತೊಂದು ಕ್ರೌರ್ಯದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ನಗರದ ಬಣಗಾರ ಲೇಔಟ್‌ನಲ್ಲಿ ಹೊಟ್ಟೆ ಬಗೆದ ಸ್ಥಿತಿಯಲ್ಲಿ ಏಳು ತಿಂಗಳ ಕರುವಿನ ಶವ ಪತ್ತೆಯಾಗಿದೆ. ಕರು ಶರಣಪ್ಪ ಬಾರಕೇರ ಎಂಬುವವರಿಗೆ ಸೇರಿದ್ದು, ಕರುವಿನ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

Comments are closed.