Home Crime Bangalore: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ಓರ್ವ ಅರೆಸ್ಟ್‌

Bangalore: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ಓರ್ವ ಅರೆಸ್ಟ್‌

ಫೋಟೋ ಕೃಪೆ: ಉದಯವಾಣಿ

Hindu neighbor gifts plot of land

Hindu neighbour gifts land to Muslim journalist

Bangalore: ಚಾಮರಾಜಪೇಟೆಯ ಓಲ್ಡ್‌ ಪೆನ್ಷನ್‌ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯನ್ನು ಕಾಟನ್‌ ಪೇಟೆ ಪೊಲೀಸರು ಬಂಧನ ಮಾಡಿ, ಸ್ಥಳ ಮಹಜರು ಮಾಡಿರುವ ಕುರಿತು ವರದಿಯಾಗಿದೆ.

ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಪೊಲೀಸರು ಭಾನುವಾರ ರಾತ್ರಿ ಓರ್ವ ಆರೋಪಿಯನ್ನು ಬಂಧನ ಮಾಡಿ ವಿಚಾರಣೆ ಮಾಡಿದ್ದು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ರಮೇಶ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕ್ಷೇಮವಾಗಿದೆ. ಗಾಯ ಮಾಸಲು ಇನ್ನೂ ಎರಡು ವಾರ ಬೇಕು ಎಂದು ಹೇಳಲಾಗಿದೆ.