Mahakumbh: ಮಹಾ ಕುಂಭಮೇಳಕ್ಕೆ ಮುಸ್ಲಿಮರ ಪ್ರವೇಶ ವಿಚಾರ – ಅಚ್ಚರಿ ಸ್ಟೇಟ್ಮೆಂಟ್ ನೀಡಿದ ಸಿಎಂ ಯೋಗಿ ಆದಿತ್ಯನಾಥ್

Mahakumbh: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ(Maha Kumbh mela)ನಡೆಯಲಿದೆ. 7,000 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿದೆ. ಈ ಮಹಾಕುಂಭದಲ್ಲಿ ಮುಸ್ಲಿಮರ ಪ್ರವೇಶದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಇದೀಗ ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

ಈ ಕುರಿತು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್​, ಭಾರತ ಮತ್ತು ಭಾರತೀಯತೆಯ ಬಗ್ಗೆ ಗೌರವ ಇರುವವರು ಇಲ್ಲಿಗೆ ಬರಬಹುದು. ಆದರೆ ಯಾರಾದರೂ ಕೆಟ್ಟ ಮನಸ್ಥಿತಿಯಿಂದ ಇಲ್ಲಿಗೆ ಬಂದರೆ ಅವರಿಗೆ ಬೇರೆ ರೀತಿಯಲ್ಲಿ ಚಿಕಿತ್ಸೆ ನೀಡಬಹುದು. ಹಾಗಾಗಿ ಅಂತಹವರು ಬರದಿದ್ದರೆ ಒಳ್ಳೆಯದು, ಆದರೆ ಶ್ರದ್ಧಾ-ಭಕ್ತಿಯೊಂದಿಗೆ ಬರುವ ಪ್ರತಿಯೊಬ್ಬರಿಗೂ ಪ್ರಯಾಗ್​ರಾಜ್​ಗೆ ಸ್ವಾಗತ ಎಂದರು.

Comments are closed, but trackbacks and pingbacks are open.