Naxalite : ಶರಣಾಗತಿ ಆದ್ರೂ ಕಾಡಲ್ಲಿ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟ ನಕ್ಸಲೆಟ್ಸ್ !! ಯಾಕಾಗಿ? ಪರಮೇಶ್ವರ್ ಕೊಟ್ರು ಅಚ್ಚರಿ ಸ್ಟೇಟ್ಮೆಂಟ್
Naxalite : ಕರ್ನಾಟಕದ ಇತಿಹಾಸದಲ್ಲೇ ಮೊದಲೆಂಬಂತೆ ಇತ್ತೀಚಿಗೆ ಆರು ಜನ ನಕ್ಸಲೆಟ್ ಗಳು ತಮ್ಮೆಲ್ಲ ಕೃತ್ಯಗಳನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗತಿಯಾಗಿ ಬಂಧನಕೊಳಗಾದರು. ಆದರೆ ಈ ಬೆನ್ನಲ್ಲೇ ಅವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ಏನು ಮಾಡಿದರು ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ.
ಹೌದು, ಹೋರಾಟದ ಹಾದಿ ತೊರೆದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ. ಹೀಗಾಗಿ ಸದ್ಯ ನಕ್ಸಲರ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಂದಹಾಗೆ ನಕ್ಸಲರು( Naxalite) ಶಸ್ತ್ರಾಸ್ತ್ರ ಸಮೇತ ಚಿಕ್ಕಮಗಳೂರು ಕಾಡಿನಲ್ಲಿ ಓಡಾಡುತ್ತಿದ್ದುದಕ್ಕೆ, ಅವರ ಬಳಿ ಶಸ್ತ್ರಾಸ್ತ್ರ ಇರುವ ಬಗ್ಗೆ 4 ತಿಂಗಳ ಹಿಂದೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಪೊಲೀಸರು ನಕ್ಸಲರ ಬಳಿ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಕ್ಸಲರ ತನಿಖೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ರಚನೆ ಮಾಡಲಾಗಿದೆ. ಸದ್ಯ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳಿರುವ ಬಾಲಾಜಿ ಸಿಂಗ್ ತಂಡ ಮಾಹಿತಿ ಕಲೆಹಾಕಲಿದೆ.
ಇನ್ನು ಈ ಕುರಿತು ಗೃಹ ಸಚಿವ ಪರಮೇಶ್ವರವರು ಪ್ರತಿಕ್ರಿಯಿಸಿದ್ದು ಶರಣಾಗತರಾದ ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಎಸೆದಿದ್ದಾರೆ ಎಂಬುವುದು ತಿಳಿದಿಲ್ಲ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಶರಣಾಗತರಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದರೆ ಎಂದು ತಿಳಿಸಿದರು.
Comments are closed, but trackbacks and pingbacks are open.