Maha Kumbh Mela: 7,000 ಕೋಟಿ ವೆಚ್ಚದಲ್ಲಿ ನಡೆವ ಕುಂಭಮೇಳದಿಂದ ಉತ್ತರ ಪ್ರದೇಶ ಗಳಿಸುವ ಆದಾಯವೆಷ್ಟು? ಗೊತ್ತಾದ್ರೆ ಶಾಕ್ ಆಗ್ತೀರಾ

Share the Article

Maha Kumbh Mela: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ(Maha Kumbh Mela)ನಡೆಯಲಿದೆ. 7,000 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿದೆ. ಹಾಗಿದ್ದರೆ ಈ ಮಹಾ ಕುಂಭಮೇಳದಿಂದ ಬರುವ ಆದಾಯವೆಷ್ಟು ಗೊತ್ತಾ? ಕೇಳಿದರೆ ನೀವೇ ಶಾಕ್ ಆಗುತ್ತೀರಿ.

ಈ ಮಹಾ ಕುಂಭಮೇಳಕ್ಕೆ ಪ್ರಪಂಚದಾದ್ಯಂತದ 40 ಕೋಟಿ ಭಕ್ತರನ್ನು ಸ್ವಾಗತಿಸಲು ಪ್ರಯಾಗ್ ನಗರವು ಸಜ್ಜಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸಿದ್ಧತೆ ಆರಂಭಿಸಿದೆ. ಒಟ್ಟಿನಲ್ಲಿ 40 ಕೋಟಿ ಭಕ್ತರು ಬರುವ ಸಾಧ್ಯತೆಯಿರುವ ಕಾರಣ ಇದು ಉತ್ತರ ಪ್ರದೇಶಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ದೇಶವು ತನ್ನ ಪ್ರಾಚೀನ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಈ ಬಾರಿಯ ಮಹಾಕುಂಭ ಭವ್ಯ, ದಿವ್ಯ ಮತ್ತು ಡಿಜಿಟಲ್ ಆಗಲಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.

Comments are closed.