Pilikula (Mangalore): ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ

Pilikula (Mangalore): ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಮಂಗಳೂರಿನ ಮೃಗಾಲಯಕ್ಕೆ 14 ವರ್ಷದ ಹುಲಿಯು ಎರಡು ಮರಿಗಳಿಗೆ ಜನ್ಮ ನೀಡಿದೆ.

ತಾಯಿ ರಾಣಿ ಹಾಗೂ ಮರಿಗಳೆರಡು ಆರೋಗ್ಯವಾಗಿದ್ದು, 2016 ರಲ್ಲಿ ಐದು, 2021 ರಲ್ಲಿ ಮೂರು ಆರೋಗ್ಯವಂತ ಮರಿಗಳಿಗೆ ರಾಣಿ ಜನ್ಮ ನೀಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳದಿಂದ ಗಂಡು ಹುಲಿ ಬದಲಾಗಿ ರಾಣಿಯನ್ನು ಪಿಲಿಕುಳಕ್ಕೆ ತರಲಾಗಿತ್ತು. ಹೊಸ ಮರಿಗಳ ಜನನದ ಜೊತೆಗೆ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸೇರಿ ಹುಲಿಗಳ ಸಂಖ್ಯೆ 10 ಆಗಿದೆ.

ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಎಚ್‌ ಜಯಪ್ರಕಾಶ್‌ ಭಂಡಾರಿ ಅವರು ಹೊಸದಾಗಿ ಹುಟ್ಟಿದ ಮರಿಗಳ ಲಿಂಗವನ್ನು ಎರಡು ತಿಂಗಳ ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.