Master Anand Family : ಮಾಸ್ಟರ್ ಆನಂದ್ ದಂಪತಿಗೆ ವಿಚ್ಛೇದನ? ಚಳಿ ಬಿಡಿಸಿದ ಪತ್ನಿ ಯಶಸ್ವಿನಿ !!
Master Anand Family : ಕಲಾವಿದರ ಡಿವೋರ್ಸ್ ವದಂತಿಗಳು (Divorce News) ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆಗಾಗ ಈ ರೀತಿಯ ಕೆಲವು ಗಾಸಿಪ್ ಗಳು ಹರಡುತ್ತಲೇ ಇರುತ್ತವೆ. ಇದೀಗ ಮಾಸ್ಟರ್ ಆನಂದ್ ದಂಪತಿ (Master anand) ಬಗ್ಗೆ ಕೆಲವು ದಿನಗಳಿಂದ ಹೊಸ ಸುದ್ದಿಯೊಂದು ವೈರಲ್ ಆಗ್ತಿದೆ.
ಹೌದು, ನಟ ನಟಿ ದಂಪತಿಗಳು ಡಿವೋರ್ಸ್ ಪಡೆಯುವ ವಿಚಾರಕ್ಕೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ, ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರು ತುಳುಕು ಹಾಕಿಕೊಂಡಿದೆ. ಮಹಿಳೆಯೊಬ್ಬರು ಮಾಡಿದ ಒಂದೇ ಒಂದು ಕಮೆಂಟ್‌ನಿಂದ ಈ ಸುದ್ದಿ ಮುನ್ನೆಲೆ ಬಂದಿದ್ದು, ಈಗಾಗಲೇ ಯಶಸ್ವಿನಿ ಮಾಸ್ಟರ್ ಆನಂದ್ ಈ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದು, ಮನಸೋಇಚ್ಛೆ ಕಮೆಂಟ್ ಹಾಕುವವರ ಚಳಿ ಬಿಡಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ನಟ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಇದೀಗ ಒಂದು ಕಮೆಂಟ್ ರಿಪ್ಲೈ ಮಾಡಿದ್ದು ಗಮನ ಸೆಳೆದಿದೆ. ತುಂಬ ವಿನಯವಾಗಿಯೇ, ತಾವು ಏನು ಹೇಳಬೇಕೋ ಅದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಯಶಸ್ವಿನಿ ಆನಂದ್ ಅವರು ಒಂದು ರೀಲ್ಸ್ ಪೋಸ್ಟ್ ಮಾಡಿದ್ದರು. ತೀರ ಚಿಕ್ಕದಾದ ಸ್ಕರ್ಟ್ ಹಾಕಿಕೊಂಡು, ʼಈ ಹಾರ್ಟಿಗೆ..ಏನಾಗಿದೆʼ ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಯಶಸ್ವಿನಿ ಅವರ ಈ ರೀಲ್ಸ್‌ಗೆ ಅನೇಕರು ಒಳ್ಳೆಯ ಕಮೆಂಟ್ ಹಾಕಿದ್ದಾರೆ. ಅವರನ್ನ ಹೊಗಳಿದ್ದಾರೆ. ಆದರೂ ಒಬ್ಬಳು ಯುವತಿ ಸ್ವಲ್ಪ ಅಧಿಕಪ್ರಸಂಗತನದ ಕಮೆಂಟ್ ಮಾಡಿದ್ದಳು..ʼಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್ ಆಗಲಿದೆʼ ಎಂದು ಹೇಳಿದ್ದಳು.
ಯುವತಿಯ ಈ ಕಮೆಂಟ್‌ಗೆ ಯಶಸ್ವಿನಿ ಆನಂದ್ ತೀಕ್ಷ್ಣವಾಗಿಯೇ ಉತ್ತರಿಸಿದ್ದಾರೆ. ʼಮೇಡಂ..ಅದು ಎಂದಿಗೂ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತಲೂ ಜಾಸ್ತಿ ನನ್ನ ಗಂಡನನ್ನೇ ಪ್ರೀತಿಸುತ್ತೇನೆ. ಇಂಥದ್ದನ್ನ ದಯವಿಟ್ಟು ಹೇಳಬೇಡಿ ಮತ್ತು ಇಲ್ಲಸಲ್ಲದ್ದನ್ನ ರೂಮರ್ ಮಾಡಬೇಡಿʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇಂದು ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ʼತಾವು ಪತಿ ಆನಂದ್ ಅವರೊಂದಿಗೆ ಇರುವ ಹಳೇ ಫೋಟೋವನ್ನ ಹಂಚಿಕೊಂಡಿದ್ದಾರೆʼ. ಈ ಫೋಟೋ ನೋಡಿ ಕಣ್ಣೀರು ಬಂತು ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.
great articletai kuda bokep